ಉದಯವಾಹಿನಿ ಕೊಲ್ಹಾರ : ತಾಲೂಕಿನ ಹಣಮಾಪೂರ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದಚುನಾವಣೆಯಲ್ಲಿ ನೂತನಅಧ್ಯಕ್ಷರಾಗಿ ಶ್ರೀಕಾಂತ ಮಲ್ಲಪ್ಪಗಣಿ ಹಾಗೂ ಉಪಾಧ್ಯಕ್ಷರಾಗಿ ಸಾವಿತ್ರಿ ದುಂಜ0ಗಾಣಿ ಅವಿರೋಧ ಆಯ್ಕೆಯಾಗಿದ್ದಾರೆ. ಮ0ಗಳವಾರ ಅಧ್ಯಕ್ಷ ಮತ್ತುಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಮಟ್ಟಿಹಾಳ ಗ್ರಾಮದ ಗ್ರಾ ಪಂ ಸದಸ್ಯ ಶ್ರೀಕಾಂತ ಗಣಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಳೂತಿ ಗ್ರಾಮದ ಸದಸ್ಯ ಸಾವಿತ್ರಿ ದುಂಡಪ್ಪಜ0ಗಾಣಿ ಇಬ್ಬರು ನಾಮಪತ್ರ ಸಲ್ಲಿಸಿದರು. ಆದರೆ ಇವರ ವಿರುದ್ಧ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧವಾಗಿ ಆಯ್ಕೆಯಾದರು ಎ0ದು ಚುನಾವಣಾಧಿಕಾರಿ ಬಸವರಾಜ ಬಂಕಾಪೂರ ತಿಳಿಸಿದರು. ಈ ಸಂದರ್ಭದಲ್ಲಿ ತಾನಾಜಿಎಸ್ ನಾಗರಾಳ ಮಾತನಾಡಿ, ನಾಲ್ಕು ಗ್ರಾಮಗಳ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಗುರುಹಿರಿಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೆಂಬಲ ಕೊಟ್ಟುಆಯ್ಕೆ ಮಾಡಿದ್ದಾರೆ. ಹೀಗಾಗಿ ಗ್ರಾಮದ ಗುರುಹಿರಿಯರಿಗೆ ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷಆರ್ ಬಿ ಪಕಾಲಿ, ಕಲ್ಲುದೇಸಾಯಿ, ತಾನಾಜಿ ನಾಗರಾಳ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!