ಉದಯವಾಹಿನಿ, IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಾಡಿದ ಫೀಲ್ಡಿಂಗ್ ಪ್ರಮಾದಗಳು ತಂಡಕ್ಕೆ ಭಾರೀ ಹೊಡೆತ ನೀಡಿವೆ. ಸನ್​ರೈಸರ್ಸ್​ ಹೈದರಾಬಾದ್ ತಂಡದ ಸ್ಫೋಟಕ ಓಪನರ್ ಇಶಾನ್ ಕಿಶನ್ ಅವರಿಗೆ ನೀಡಿದ ಸರಣಿ ಜೀವದಾನಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಅಷ್ಟೇ ಅಲ್ಲದೆ, ಈ ಘಟನೆಯನ್ನು ಹಾಸ್ಯಮಯವಾಗಿ ಬಳಸಿಕೊಂಡ ಕಿಶನ್, ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಪಂಜಾಬ್ ತಂಡದ ಕಾಲೆಳೆದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಈ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 55 ರನ್ ಚಚ್ಚಿದರು. ಆದರೆ ಈ ಇನ್ನಿಂಗ್ಸ್‌ನಲ್ಲಿ ಕಿಶನ್ ಅವರಿಗೆ ಪಂಜಾಬ್ ಕಿಂಗ್ಸ್​ ಫೀಲ್ಡರ್‌ಗಳು ಬರೋಬ್ಬರಿ ಮೂರು ಬಾರಿ ಜೀವದಾನ ನೀಡಿದ್ದರು ಎಂಬುದು ವಿಶೇಷ.

ಇಶಾನ್ ಕಿಶನ್ ಕೇವಲ 9 ರನ್ ಗಳಿಸಿದ್ದಾಗ ಕೂಪರ್ ಕೊನೊಲಿ ಕ್ಯಾಚ್ ನೀಡಿದ್ದರು. ಆದರೆ ಈ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದರು.
ಇದಾದ ಬಳಿಕ 18 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಕೂಡ ಇಶಾನ್ ಕಿಶನ್ ನೀಡಿದ ಸುಲಭ ಕ್ಯಾಚ್ ಕೈಬಿಟ್ಟರು.
ಇದರ ಬೆನ್ನಲ್ಲೇ ಇಶಾನ್ ಕಿಶನ್ ಅವರನ್ನು ಸ್ಟಂಪಿಂಗ್ ಅವಕಾಶವನ್ನೂ ವಿಕೆಟ್ ಕೀಪರ್ ಪ್ರಭ್‌ಸಿಮ್ರಾನ್ ಸಿಂಗ್ ಮಿಸ್ ಮಾಡಿಕೊಂಡರು.
ಹೀಗೆ ಮೂರು ಜೀವದಾನ ಪಡೆದ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಕೇವಲ 32 ಎಸೆತಗಳಲ್ಲಿ 55 ರನ್​​ ಚಚ್ಚಿ ಸನ್​ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

Leave a Reply

Your email address will not be published. Required fields are marked *

error: Content is protected !!