ಉದಯವಾಹಿನಿ, ಕೆ.ಆರ್.ಪುರ : ಬಂಜೆತನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಐವಿಎಫ್ ಸೇವೆ ಅನಿವಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ಕಿಂಡರ್ ವುಮೆನ್ಸ್ ಹಾಸ್ಪಿಟಲ್ ಮತ್ತು ಘರ್ಟಿಲಿಟಿ ಸೆಂಟರ್ ಹೆಚ್ಚು ಪೂರಕವಾಗಿದೆ ನಟಿ ಶ್ವೇತಾ ಶ್ರೀವಾಸ್ತವ್ ಅವರು ಎಂದು ಹೇಳಿದರು.
ಮಹದೇವಪುರ ಕ್ಷೇತ್ರದ ಗರುಎಚಾರಪಾಳ್ಯದಲ್ಲಿ ಕಿಂಡರ್ ವುಮೆನ್ಸ್ ಆಸ್ಪತ್ರೆ ಮತ್ತು ಫರ್ಟಿಲಿಟಿ ಸೆಂಟರ್ ಗೆ ಚಾಲನೆ ನೀಡಿ ಮಾತನಾಡಿದರು.
ಐವಿಎಫ್ ಸೇವೆಗಳ ಮೂಲಕ ಕಿಂಡರ್ ಆಸ್ಪತ್ರೆ ದಂಪತಿಗಳಿಗೆ ಸಂತಾನಾಭಿವೃದ್ಧಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ,
ಆರೋಗ್ಯ ಸಮಸ್ಯೆ ಇರುವ ಅಸಂಖ್ಯಾತ ದಂಪತಿಗಳಿಗೆ ಭರವಸೆ ಮತ್ತು ಸಂತೋಷವನ್ನು ತರುತ್ತಿರುವ ಈ ಮಹತ್ವದ ಸಂದರ್ಭದ ಭಾಗವಾಗಲು ನನಗೆ ಸಂತೋಷ ಎನಿಸುತ್ತಿದೆ ಎಂದರು.
ಆಸ್ಪತ್ರೆಯ ಉತ್ಕೃಷ್ಟತೆಯ ಬದ್ಧತೆಯನ್ನು ಎತ್ತಿ ತೋರಿಸುತ್ತಾ, ನಮ್ಮ ಸುಧಾರಿತ ಭ್ರೂಣಶಾಸ್ತ್ರದ ತಂತ್ರಗಳು ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳು ಪ್ರತಿ ೨ ಕಾರ್ಯವಿಧಾನವನ್ನು ಅತ್ಯಂತ ನಿಖರ ಮತ್ತು ಕಾಳಜಿಯೊಂದಿಗೆ ನಿರ್ವಹಿಸುತ್ತದೆ, ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!