ಉದಯವಾಹಿನಿ, ಬೆಂಗಳೂರು: ಎಂಟು ತಿಂಗಳ ಮಗು ಸೇರಿ ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡುಗೋಡಿಯ ವೀರಾರ್ಜುನ್ ವಿಜಯ್ (31), ಅವರ ಪತ್ನಿ ಹೇಮಾವತಿ (29), ಮಕ್ಕಳಾದ ಎಂಟು ತಿಂಗಳ ಸೃಷ್ಠಿ ಸುನಯನಾ, ಎರಡು ವರ್ಷದ ಮೋಕ್ಷಾ ಮೇಘ ನಯನಾ ಮೃತಪಟ್ಟವರು ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಇಬ್ಬರೂ ಮಕ್ಕಳನ್ನು ಕೊಂದು ವಿಜಯ್ ಹಾಗೂ ಹೇಮಾವತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೀರಾರ್ಜುನ್ ವಿಜಯ್, 6 ವರ್ಷಗಳ ಹಿಂದೆಯಷ್ಟೇ ಹೇಮಾವತಿ ಅವರನ್ನು ಮದುವೆಯಾಗಿದ್ದರು. ಸೀಗೆಹಳ್ಳಿಯ ಸಾಯಿ ಗಾರ್ಡನ್‌ನ ಮನೆಯೊಂದರಲ್ಲಿ ವಾಸವಿದ್ದರು. ಜುಲೈ 31ರಂದು ರಾತ್ರಿ ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
