ಉದಯವಾಹಿನಿ, ಕೋಲಾರ: ಕೋಲಾರ ಸೇರಿದಂತೆ ಕರ್ನಾಟಕ ಆಂದ್ರಪ್ರದೇಶ, ತಮಿಳುನಾಡು ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಕೋಲಾರದ ಪೋಲಿಸರು ಬಂಧಿಸಿದ್ದಾರೆ.
ಇತ್ತೀಚೆಗೆ ಕೋಲಾರ ನಗರದ ಕೀಲುಕೋಟೆಯಲ್ಲಿ ಬೀಗ ಹಾಕಿದ್ದ ಮನೆ ಒಂದನ್ನು ಬೀಗ ಒಡೆದು ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಮೇಲಾಧಿಕಾರಿಗಳ ಮಾರ್ಗದರ್ಶದಂತೆ ಕೋಲಾರದ ಮಹಿಳಾ ಪೋಲಿಸ್ ಠಾಣೆ ಇನ್ಸ್‌ಪೆಕ್ಟರ್ ಬೈರ ನೇತೃತ್ವದ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬಾಗೇಪಲ್ಲಿ ತಾಲ್ಲೂಕಿನ ಕೊಟ್ಟಂಪಲ್ಲಿ ಉಮಾಶಂಕರ್ ಮತ್ತು ಕೆ.ಎಸ್.ಶ್ರೀನಾಥ್ ಹಾಗೂ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೊಡುಗೇಹಳ್ಳಿಯ ಜಗನ್ನಾಥ @ ಜಗ್ಗ ಎಂದು ಗುರುತಿಸಲಾಗಿದೆ. ಬಂಧಿತರಿಂದ ೨೦ ಲಕ್ಷ ಮೌಲ್ಯದ ೨೭೦ ಗ್ರಾಂ ಚಿನ್ನ, ೫೦೭ ಗ್ರಾಂ ಬೆಳ್ಳಿ, ಟಿವಿ, ವಾಚುಗಳು, ೨ ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಕೆ.ಜಿ.ಎಫ್ ಎಸ್.ಪಿ. ಶಾಂತರಾಜು, ಸಿಪಿಐ ಹರೀಶ್ ಸೇರಿದಂತೆ ಇತರೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು,
