ಉದಯವಾಹಿನಿ, ಬೆಂಗಳೂರು: ಕಳೆದ ಎರಡು ತಿಂಗಳಿನಿಂದಲೂ ಏರುತ್ತಲೆ ಇದ್ದ ಟಮೋಟೊ ಬೆಲೆಯಲ್ಲಿ ಕುಸಿತ ಕಾಣುತ್ತಿದ್ದು ಗ್ರಾಹಕರಿಗೆ ತುಸು ಸಮಾಧಾನ ತಂದಿದ್ದರೆ ಬೆಳೆಗಾರರಿಗೆ ನಿರಾಸೆ ತಂದಿದೆ. ಷೇರು ಮಾರುಕಟ್ಟೆಯಂತೆ ದಿನ ನೀತ್ಯ ಏರಿಳಿತವಾಗುತ್ತಿದ್ದ ಟಮೋಟೊ ಬೆಲೆ ಕಳೆದ ಎರಡು ದಿನಗಳಿಂದ ಇಳಿತವಾಗುತ್ತಿದೆ ಕೆಜಿಗೆ 150 ರಿಂದ 200 ರೂ ವರೆಗೂ ತಲುಪಿದ್ದ ಟಮೋಟೊ 100 ರೂ.ಗೆ ಬಂದಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದು ಬಳಕೆ ಕಡಿಮೆ ಮಾಡಿ ಬಹಳಷ್ಟು ಜನ ಹುಣಸೆಹಣ್ಣಿನ ಮೋರೆ ಹೋಗಿದ್ದರು. ಆದರೆ ಇವಾಗ ಬೆಲೆ ಕುಸಿತವಾಗುತ್ತಿದ್ದು ಸಮಾಧಾನ ತಂದಿದೆ. ಏಷ್ಯಾದ ಅತೀದೊಡ್ಡ ಟಮೋಟೋ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಒಂದು ಕ್ರೇಟ್ ಟಮೋಟೋ 2700 ರೂ.ಗೆ ಮಾರಾಟವಾಗಿ ದಾಖಲೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಬರೊಬ್ಬರಿ 1000 ಕುಸಿತವಾಗಿದೆ ಇದರಿಂದ ರೈತರಿಗೆ ನಿರಾಸೆ ತಂದಿದೆ. 
