ಉದಯವಾಹಿನಿ, ನ್ಯೂಯಾರ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಹತ್ಯೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಅಮೆರಿಕಾದ ಎಫ್‌ಬಿಐ ಅಧಿಕಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಎಫ್‌ಬಿಐ ಅಧಿಕಾರಿಗಳು ನಿರಾಕರಿಸಿದ್ದಾರೆ. ಕ್ರೆಹ್ ಡೆಲೆವ್ ರಾಬರ್ಟ್‌ಸನ್ ಹತ್ಯೆಗೊಳಗಾದ ವ್ಯಕ್ತಿ. ಸಾಲ್ಟ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದಲ್ಲಿರುವ ರಾಬರ್ಟ್‌ಸನ್‌ನ ಮನೆಯಲ್ಲಿ ಆಗಸ್ಟ್ ೯ರಂದು ಬೆಳಗ್ಗೆ ೬.೧೫ ಕ್ಕೆ ಬಂಧನಕ್ಕೆ ಮತ್ತು ಸರ್ಚ್ ವಾರಂಟ್ ಯತ್ನಿಸುತ್ತಿದ್ದಾಗ ಗುಂಡಿನ ದಾಳಿ ನಡೆದ ಹಿನ್ನಲೆ ಹತ್ಯೆ ಮಾಡಲಾಗಿದೆ ಎಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಗುಂಡಿನ ದಾಳಿ ಸಂದರ್ಭದಲ್ಲಿ ರಾಬರ್ಟ್‌ಸನ್ ಶಸ್ತ್ರಸಜ್ಜಿತನಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಬರ್ಟ್‌ಸನ್ ಮರಗೆಲಸ ವ್ಯಾಪಾರವನ್ನು ಹೊಂದಿದ್ದು, ಆದರೆ ರಾಜ್ಯ ದಾಖಲೆಗಳ ಪ್ರಕಾರ ಕಳೆದ ವರ್ಷ ಅವರ ವ್ಯಾಪಾರಕ್ಕೆ ನೀಡಿದ್ದ ಲೈಸೆನ್ಸ್ ಮುಗಿದಿದ್ದು ಮತ್ತೆ ಪರವಾನಗಿಯನ್ನು ನವೀಕರಿಸಲಿಲ್ಲ. ಲಿಂಕ್ಡ್‌ಇನ್ನಲ್ಲಿ ರಾಬರ್ಟ್‌ಸನ್ ೪೫ ವರ್ಷಗಳ ಕಾಲ ಸ್ಟ್ರಕ್ಚರಲ್ ಸ್ಟೀಲ್ ಮತ್ತು ವೆಲ್ಡಿಂಗ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವುದಾಗಿ ಬರೆದುಕೊಂಡಿದ್ದಾರೆ. ಅವರು ನಿವೃತ್ತರಾದ ಮೇಲೆ ಮರಗೆಲಸ ಉದ್ಯಮ ಆರಂಭ ಮಾಡಿದ್ದರು ಎನ್ನಲಾಗಿದೆ. ಜೋ ಬೈಡನ್ ಅವರನ್ನು ಕೊಲೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟ್ ಮಾಡಿದ್ದ.

Leave a Reply

Your email address will not be published. Required fields are marked *

error: Content is protected !!