ಉದಯವಾಹಿನಿ, ಇಸ್ಲಾಮಾಬಾದ್: ಈಗಾಗಲೇ ಪಾಕಿಸ್ತಾನದ ಸಂಸತ್ತನ್ನು ಔಪಚಾರಿಕವಾಗಿ ವಿಸರ್ಜಿಸಲಾಗಿದ್ದು, ಹಾಗಾಗಿ ೯೦ ದಿನಗಳ ಒಳಗಾಗಿ ಚುನಾವಣೆಗಳು ನಡೆಯಬೇಕಿದೆ. ಆದರೆ ೯೦ ದಿನಗಳ ಗಡುವನ್ನು ಕೂಡ ಮೀರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಗೋಚಲಾರಂಭಿಸಿದೆ. ಹಾಗಾಗಿ ಮುಂದೆ ನಡೆಯಲಿರುವ ಸಾರ್ವತ್ರಿಕ ಚುನಾವಣಾ ಇದೀಗ ಮತ್ತಷ್ಟು ವಿಳಂಬವಾಗುವ ಲಕ್ಷಣ ಗೋಚರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಚುನಾವಣಾ ಆಯೋ
ಗ, ಜನಗಣತಿಯ ಹೊಸ ಮಾಹಿತಿ ಇದೀಗ ಲಭ್ಯವಾಗಿದ್ದು, ಹಾಗಾಗಿ ಚುನಾವಣೆಯ ಗಡಿಗುರುತುಗಳನ್ನು ನಾವು ಮತ್ತೊಮ್ಮೆ ಪುನರ್‌ರಚಿಸಬೇಕಿದೆ. ಜನಗಣತಿ ಮುಗಿದ ನಂತರ ಚುನಾವಣೆಗಳು ನಡೆಯುತ್ತವೆ, ಇದು ಸುಮಾರು ನಾಲ್ಕು ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಪರಿಣಾಮವಾಗಿ, ಚುನಾವಣೆಗಳು ಮುಂದಿನ ವರ್ಷಕ್ಕೆ ಮುಂದೂಡಬಹುದು ಎಂದು ತಿಳಿಸಿದೆ. ಹಾಗಾಗಿ ಈ ಮುಂದಿನ ೯೦ ದಿನಗಳಲ್ಲಿ ಚುನಾವಣಾ ಆಯೋಗವು ಎಲ್ಲಾ ರೀತಿಯಲ್ಲಿ ಸಿದ್ಧತೆಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಪ್ರಾದೇಶಿಕ ಮಟ್ಟದಲ್ಲಿ ನೀತಿ-ನಿಯಮಗಳ ಕುರಿತಾಗಿ ನಿರ್ಧಾರ ತೆಗೆದುಕೊಂಡ ಬಳಿಕ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ. ಇನ್ನು ಪಾಕ್ ಸಂಸತ್ತನ್ನು ವಿಸರ್ಜಿಸಲಾಗಿದೆ ಎಂದು ಬುಧವಾರದಂದು ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಬಹಿರಂಗಪಡಿಸಿದ್ದರು. ಹಾಗಾಗಿ ಸದ್ಯದಲ್ಲೇ ಪಾಕ್‌ನಲ್ಲಿ ಉಸ್ತುವಾರಿ ಸರ್ಕಾರವು ರಚನೆಗೊಳ್ಳಲಿದೆ.
