ಉದಯವಾಹಿನಿ, ಬೆಂಗಳೂರು, : ಈಗಾಗಲೇ ಒಮ್ಮೆ ಜಲಪ್ರಳಯವನ್ನು ಅನುಭವಿಸಲಾಗಿದೆ. ಕಾರ್ತಿಕದವರೆಗೆ ಶ್ರಾವಣ ಅಥವಾ ಗೌರಿ ಸಂದರ್ಭದಲ್ಲಿ ಮತ್ತೊಮ್ಮೆ ಜಲಕಂಟಕ ಇದೆ ಎಂದು ಕೋಡಿಹಳ್ಳಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕವಾಗಿ ವಿಪರೀತವಾದ ಮಳೆ, ಯುದ್ಧ ಭೀತಿ, ಭೂಕಂಪ, ಸುನಾಮಿ, ನಿತ್ಯ ಸಾವು-ನೋವಿನಂತಹ ಘಟನೆಗಳು ಸಂಭವಿಸುತ್ತವೆ.
ವಿಷ ಅನಿಲ ಬೀಸುತ್ತದೆ, ಅದು ಎಲ್ಲಾ ಕಡೆ ಪಸರಿಸಲಿದ್ದು, ಭಾರತಕ್ಕೂ ಅಪಾಯ ಉಂಟುಮಾಡುತ್ತದೆ. ಭಾರೀ ಮಳೆಯಿಂದಾಗಿ ಜಾಗತಿಕವಾಗಿ ಎರಡು ದೇಶಗಳೇ ನಾಶವಾಗುತ್ತದೆ. ಭಾರತದಲ್ಲೂ ಜಲಪ್ರಳಯದ ಮುನ್ಸೂಚನೆಯಿದೆ. ಭೂಕಂಪವಾಗಿ ದೊಡ್ಡ ನಗರಗಳಲ್ಲಿ ಸಾವು-ನೋವು ಹೆಚ್ಚಾಗಬಹುದು. ಆದರೆ ದಕ್ಷಿಣ ಭಾರತದಲ್ಲಿ ಸಮೃದ್ಧಿ ನೆಲೆಸಲಿದೆ ಎಂದು ಹೇಳಿದರು. ಇದ್ದಕ್ಕಿದ್ದಂತೆ ಜನ ಸಾಯುತ್ತಾರೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಅದರ ಬಗ್ಗೆ ಎಚ್ಚರಗೊಳ್ಳಬೇಕಿದೆ ಎಂದರು. ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ. ಕಾಲ ಬಂದಾಗ ಮಾತನಾಡುತ್ತೇನೆ. ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಲಿದೆ. ಮುಂದಿನ ದಿನಗಳಲ್ಲಿ ಅವರಿಗೂ ಯೋಗವಿದೆ ಎಂದರು.
ದೈವಬಲದ ಮೇಲೆ ನಂಬಿಕೆ ಇಟ್ಟವರಿಗೆ ಒಳ್ಳೆಯದಾಗಿದೆ. ಕೆಲವರಿಗೆ ದೈವಬಲವಿದ್ದರೂ ಪ್ರಾಕೃತಿಕ ವೈಪರೀತ್ಯಗಳಿಂದ ಸಮಸ್ಯೆಗಳಾಗುತ್ತವೆ.
