ಉದಯವಾಹಿನಿ ಚಿತ್ರದುರ್ಗ: ಸ್ವಚತೆ, ವೈಯಕ್ತಿಕ ಶುಚಿತ್ವ, ಕುಡಿಯುವ ನೀರು, ಪರಿಸರ ನೈಮಲ್ಯ ಪಾಲನೆ,  ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯತನ  ಮುಖ್ಯ ಯೋಜನಾ ಅಧಿಕಾರಿಗಳಾದ ಶ್ರೀ ಸತೀಶ್ ರೆಡ್ಡಿ ಅವರು ಮನವಿ ಮಾಡಿದರು. ಅವರು ಚಿತ್ರದುರ್ಗ ತಾಲ್ಲೂಕಿನ ಸಮೀಪದ ಗೋನೂರು ಗ್ರಾಮ ಪಂಚಾಯತಿ ವತಿಯಿಂದ ಶನಿವಾರ ಸಂಜೆ ನಡೆದ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಸ್ವಚತೆ, ವೈಯಕ್ತಿಕ ಶುಚಿತ್ವ, ನೈರ್ಮಲ್ಯ ಕುರಿತ ಜನ ಜಾಗೃತಿ ಜಾಥ ಮತ್ತು ಪಂಜಿನ ಮೆರವಣಿಗಯ  ವಿಶೇಷ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು. ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರ ಜೊತೆಗೆ ಶುದ್ದ ನೀರಿನ ಘಟಕದ  ನೀರನ್ನು ಬಳಸಬೇಕು ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
         ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೋನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಮತಿ ಗುಂಡಮ್ಮನವರು ಅರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರ ಜೊತೆಗೆ ಶುದ್ದ ಕುಡಿಯುವ ನೀರನ್ನು ಬಳಸಬೇಕು ಎಂದರು.
            ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಗೋನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಯರ್ರಿಸ್ವಾಮಿ ಅವರು  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ  ಪರಿಸರ ಸಂರಕ್ಷಣೆ,   ನೀರಿನ ಮೂಲಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚತೆ,  ಒವರ್ ಹೆಡ್‌ ಮತ್ತು ಮಿನಿ ನೀರಿನ ಟ್ಯಾಂಕ್ ಗಳನ್ನು ಕಾಲಕಾಲಕ್ಕೆ ತೊಳಸಿ, , ಕುಡಿಯುವ ನೀರಿನಿಂದ ಬರಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತಿದೆ, ನಾನು ಬದಲಾದರೆ ಜಗತ್ತು ಬದಲಾದಂತೆ, ಬದಲಾವಣೆ ನಮ್ಮಿಂದಲೇ ಅಗಲಿ ಎಂಬ ಘೋಷ ವ್ಯಾಕದಂತೆ  ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
           ಬೆಳಗಟ್ಟ ಅರೋಗ್ಯ ಕೇಂದ್ರದ ಅರೋಗ್ಯ ನೀರಿಕ್ಷಣಾಧಿಕಾರಿ ಮಹೇಶ್. ಡಿ ಮಾತನಾಡಿ  ಅರೋಗ್ಯ ಇಲಾಖೆ ವತಿಯಿಂದ  ಎಲ್ಲಾ ಗ್ರಾಮಗಳಲ್ಲಿ ಶುದ್ದ  ಕುಡಿಯುವ ನೀರು, ಶೌಚಾಲಯ ಬಳಕೆ, ಕೈ ತೊಳೆಯುವ ಕುರಿತು, ಘನತ್ಯಾಜ ವಸ್ತುಗಳ ಬಳಕೆ ವಿಲೇವಾರಿ ಹಾಗೂ ಬಿಸಿಯಾದ ಮತ್ತು ಮೆದು ಅಹಾರ ಸೇವನೆ ಮಾಡುವ ಕುರಿತು ನಮ್ಮ ಅರೋಗ್ಯ ಸಿಬ್ಬಂದಿಗಳಿಂದ, ಅಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ಭೇಟಿ ಮಾಡಿ ಅರೋಗ್ಯ ಶಿಕ್ಷಣ ನೀಡುವ ಮೂಲಕ ಅರೋಗ್ಯ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
          ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕಚೇರಿಯ  ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ವರ್ಗದದವರು,  ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಅಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘಗಳು, ಸ್ಥಳೀಯ ಯುವ  ಸಂಘಗಳು ಜನ ಜಾಗೃತಿ  ಮತ್ತು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!