
ಉದಯವಾಹಿನಿ ಇಂಡಿ: ಪಟ್ಟಣದ ವಾರ್ಡ್ ನಂಬರ್ 12ರಲ್ಲಿ ನೂತನವಾಗಿ ಸಿಂದಗಿ ರಸ್ತೆಯ ಸಾಯಿ ಸ್ಕೂಲ್ನನ ಹತ್ತಿರ ಹಳೆ ಸಾಲೋಟಗಿ ರಸ್ತೆ ಪಕ್ಕದಲ್ಲಿ ಬಡಾವಣೆ ಭಕ್ತರು,ಇಂಡಿ ನಗರದಲ್ಲಿ ಪ್ರಥಮವಾಗಿ ವಿಶೇಷವಾಗಿ ಶ್ರೀ ಆದಿಶೇಷನ ದೇವಾಲಯ ನಿರ್ಮಾಣ ಮಾಡಿದ್ದಾರೆ.ದಿನಾಂಕ 20.21ರಂದು ವಿಶೇಷವಾಗಿ ಹಾಲು ಯರಿವುದು, ಅಭಿಷೇಕ, ಭಜನೆ, ಹಾಗೂ ಧಾರ್ಮಿಕಸಭೆ ವಿಶೇಷವಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹರಿಸಿದ ಮಹನಿಯರಿಗೆ ಗೌರವಸ್ಮಾನ, ಬಡಾವಣೆಯನಿವೃತ್ತ ನೌಕರಿಗೆ ಸನ್ಮಾನ ಮತ್ತು ಬಡವಾಣೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನಡೆಯುವುದು ಹಾಗೂ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಶ್ರೀ ಆದಿಶೇಷ ಜಾತ್ರಾ ಕಮೀಟಿ ಮಾಡಿದೆ.ನಗರದ ಹಾಗೂ ಬಡಾವಣೆಯ ಸಕಲ ಭಕ್ತರು ದರ್ಶನ ಆರ್ಶಿವಾದ ಪಡೆದು ಧನ್ಯತೆಯನ್ನು ಹೂಂದಬೇಕೆಂದು ಜಾತ್ರಾ ಕಮೀಟಿಯ ಸದಸ್ಯರಾದ ಸುದೀರ ಕರಕಟ್ಟಿ,ಪಿ ಎಮ್ ಮಠಪತಿ, ಸಿದ್ದು ಡಂಗಾ,ಅರವೀಂದ ಗಾಳಿಮಠ,ಅಪ್ಪಾರಾಗೌಡ ಅಲಗೋಂಡ,ಗಂಗಾಧರ ಪಾಸೋಡಿ,ಬೋಂದರಡೆಸರ್, ಪ್ರಭು ಹೂಗಾರ, ಪರಶುರಾಮ ಚೋಪಡೆ, ಬಸಯ್ಯ ಹಿರೇಮಠ ಆನಂದ ಮಸಳಿ,ರಾಜು ಕಾಖಂಡಕಿ ತಿಳಿಸಿದ್ದಾರೆ.
