
ಉದಯವಾಹಿನಿ ಕುಶಾಲನಗರ:-ಕೊಡಗು ಮೈಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನನ್ನಂಥ ಸಮರ್ಥ ಅಭ್ಯರ್ಥಿ ಯಾರಿದ್ದಾರೆ?
ಮುಂದಿನ ಚುನಾವಣೆಗೆ ಸಿದ್ಧತೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ತಯಾರಿ ಎಂದರೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ ಎಂದರು. ನನ್ನ ಅವಧಿಯಲ್ಲಿ ಮೈಸೂರು ಬೆಂಗಳೂರು ನಡುವೆ ಹೈವೇ ನಿರ್ಮಾಣ ಹಾಗೂ ಮೈಸೂರಿನಿಂದ ಕುಶಾಲನಗರದ ವರೆಗೆ ಹೈವೇ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ಕೊಡಗು ಜಿಲ್ಲೆಗೆ 62 ಮೊಬೈಲ್ ಟವರ್ ಗಳನ್ನು ಮಂಜೂರು ಮಾಡಿಸಿದ್ದೇನೆ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ 88 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಿದ್ದು ಕುಶಾಲ್ನಗರದವರೆಗೆ ರೈಲನ್ನು ತರುವ ಕಾರ್ಯ ಪ್ರಗತಿಯಲ್ಲಿದೆ ಎಂದರಲ್ಲದೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀರಕ್ಷೆ ಎಂದರು.
