ಉದಯವಾಹಿನಿ ಕುಶಾಲನಗರ: ಇಲ್ಲಿನ ಪಟ್ಟಣದ ರೈತ ಸಹಕಾರ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.
     ಕಾರ್ಯಕ್ರಮವನ್ನು ಕೊಡಗು ಮೈಸೂರು ಸಂಸದರಾದ ಪ್ರತಾಪ್ ಸಿಂಹರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಇಂದು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹೋಗುವಾಗ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಸಿದ್ದು 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ನೋಡಿದರೆ ಮೈ ಜುಮ್ ಎನಿಸುತ್ತದೆ ಅಂದಿನ ಕಾಲದಲ್ಲಿ ಕೆಂಪೇಗೌಡರ ದೂರದೃಷ್ಟಿಯಿಂದ ಇಂದು ಬೃಹತ್ ಬೆಂಗಳೂರು ನಿರ್ಮಾಣಗೊಂಡಿದೆ ಒಂದು ಕಾಲು ಕೋಟಿ ಜನರು ವಾಸ ಮಾಡುವ ಬೆಂಗಳೂರಿನಿಂದಲೇ ರಾಜ್ಯ ಸರ್ಕಾರಕ್ಕೆ 57% ಆದಾಯ ಬರುತ್ತದೆ ಎಂದರು.ಇದೇ ಸಂದರ್ಭ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಥರ್ ಗೌಡರವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎಚ್ಎನ್ ರವೀಂದ್ರರವರನ್ನು ಸಂಘದ ಮಹಾಪೋಷಕರಾದ ಸಣ್ಣ ಗೌಡರು ಗುಲಾಬಿ ಹೂ ನೀಡುವ ಮೂಲಕ ಬರಮಾಡಿಕೊಂಡರು ಸಮಾರಂಭದ ಅಧ್ಯಕ್ಷತೆಯನ್ನು ಕುಶಾಲ ನಗರ ಸಂಘದ ಅಧ್ಯಕ್ಷರಾದ ಎಂ ಕೆ ದಿನೇಶ್ ವಹಿಸಿದ್ದರು ವೇದಿಕೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ರಾಜ್ಯ  ಘಟಕದ ಸಹ ಕಾರ್ಯದರ್ಶಿ ಚೇತನ್ ಗುಡ್ಡೆ ಹೊಸೂರು ವಿನ ಚಂದ್ರಶೇಖರ್ ಸೇರಿದಂತೆ ಸಂಘದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಇದೇ ಸಂದರ್ಭ ರಾಜ್ಯ ಸಂಘದ ನಿರ್ದೇಶಕರಾದ ಹರಪಲ್ಲಿ ರವೀಂದ್ರರವರು ಮಹಾಪೋಷಕ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು.ನಂತರ ಸಂಘದ ವತಿಯಿಂದ ಸಂಸದ ಪ್ರತಾಪ್ ಸಿಂಹರವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!