
ಉದಯವಾಹಿನಿ ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಇವರಿಗೆ ಮಿಣಜಗಿ ಗ್ರಾಮಪಂಚಾಯತ್ ನ ನೂತನ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಇತ್ತೀಚಿಗೆ ಕಾಂಗ್ರೆಸ್ ನ ಹಿರಿಯ ಮುಖಂಡ ಜಿ.ಎಸ್. ಕಶೆಟ್ಟಿ ಅವರ ಗೃಹದಲ್ಲಿ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಅಪ್ಪಾಜಿ ನಾಡಗೌಡರಿಗೆ ಈ ಸನ್ಮಾನವನ್ನು ನೀಡಲಾಯಿತು. ಗ್ರಾಮ ಪಂಚಾಯತ್ ನ ನೂತನ ಸದಸ್ಯರು ಹಾಗೂ ಗ್ರಾಮದ ಗಣ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಅಪ್ಪಾಜಿ ನಾಡಗೌಡರು ಈ ಬಾರಿ ನಡೆದ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ನಮ್ಮ ಪಕ್ಷದ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ ಗ್ರಾಮ ಪಂಚಾಯತ್ ಗಳಲ್ಲಿ ಅತಿಯಾದ ರಾಜಕೀಯ ಹಸ್ಕ್ಷೇಪ ಆಗಬಾರದೆಂಬುದು ನನ್ನ ನಿಲುವಾಗಿದೆ ಚುನಾಯಿತ ಸದಸ್ಯರು ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಜನರು ನಿಮ್ಮ ಮೇಲೆ ವಿಶ್ವಾಸವಿರಿಸಿ ನಿಮ್ಮನ್ನು ಗೆಲ್ಲಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರವೇ ಇರುವುದರಿಂದ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಜಿಎಸ್ ಕಶೆಟ್ಟಿ.ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ನಾವದಗಿ. ತಾಲೂಕ ಕಾರ್ಮಿಕ ಘಟಕದ ಅಧ್ಯಕ್ಷ ಸಂಗನಗೌಡ ಪಾಟೀಲ್ ಗ್ರಾಮದ ಗಣ್ಯರಾದ ಬಾಬುಗೌಡ ಬಿರಾದಾರ್.ಎಂ.ಸಿ. ಸಜ್ಜನ್. ಆಯ್. ಎಂ. ಬಾಗೇವಾಡಿ. ಎಸ್ ಎಸ್ ಮ್ಯಾಗೇರಿ. ಎಚ್ ಎಮ್ ನಾಯಕ್.ಪಿ.ಬಿ.ಗೊಳಸಂಗಿ. ಮುದಿಯಪ್ಪ ರಾಥೋಡ್ ಮಹಾಂತೇಶ್ ಬಿರಾದಾರ್ ಗ್ರಾಪಂ ಸದಸ್ಯರಾದ ಪುನೀತ ಗೌಡ ಬಿರಾದಾರ್ ಚಂದ್ರಶೇಖರ್ ದೇಸಾಯಿ ಪ್ರಭು ಪತ್ತೆಪುರ್ ಎ ಎಸ್ ಪಾಟೀಲ್ ಸಂಗನಗೌಡ ಪಾಟೀಲ್ ಮತ್ತಿತರರು ಇದ್ದರು.
