
ಉದಯವಾಹಿನಿ,ಚಿಂಚೋಳಿ: ಡಿ.ದೇವರಾಜ ಅರಸುರವರು ರಾಜ್ಯದ 8ನೇ ಮುಖ್ಯಮಂತ್ರಿಯಾಗಿ ಹಾಗೂ ರಾಜಕೀಯದಲ್ಲಿ ಸುದೀರ್ಘ 28ವರ್ಷಗಳಲ್ಲಿ ದಿನದಲಿತರ ಬಡವರ ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿಗಾಗಿ ಶ್ರಮಿಸಿದ ನಾಯಕರಾಗಿದ್ದರು ಎಂದು ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ ಹೇಳಿದರು.
ಪಟ್ಟಣದ ಚಂದಾಪೂರದ ಡಿ.ದೇವರಾಜ ಅರಸು ಭವನದಲ್ಲಿ ತಾಲ್ಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,ದೇವರಾಜ ಅರಸುರವರು ಹುಣುಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿ ಮೈಸೂರಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದರು.
1957ರಲ್ಲಿ ನಡೆದ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ವರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು,1977ರಲ್ಲಿ ರಾಜ್ಯದ 8ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಜನಪರ ಬಡವರ ದಿನದಲಿತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ತಂದಿದ್ದರು.
ಅಶ್ರಯ ಮನೆಗಳು,ವಿಧವೆ ವೇತನ,ಸಂಧ್ಯಾಸುರಕ್ಷಾ ಪಿಂಚಣಿ ಯೋಜನೆ ಜಾರಿಗೆ ತಂದರು,ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ,ರಾಜ್ಯದಲ್ಲಿ ಸಮಾಜಿಕ ಕ್ರಾಂತಿಗೆ ನಾಂದಿ ಹಾಡಿ ಬಡವರ ಧ್ವನಿಯಾಗಿ ತುಳಿತಕ್ಕೂಳಗಾದವರ ಪರವಾಗಿ ಗಟ್ಟಿಯಾಗಿ ನಿಂತರು,ಹಿಂದುಳಿದ ವರ್ಗಗಳ ಮಕ್ಕಳಿಗ್ಗಾಗಿ ಹಿಂದುಳಿದ ವಸತಿನಿಲಯ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅಲ್ಪಸಂಖ್ಯಾತರ ವಸತಿನಿಲಯ ಪ್ರಾರಂಭಿಸಿದ್ದರು.
ದಲಿತರು ಜೀತದಾಳುಗಳಿಂದ ರಾತ್ರಿ ಮಣ್ಣು ಸಾಗಿಸುವುದನ್ನು ನಿಷೇಧಿಸಿ,1973ರಲ್ಲಿ ಮೈಸೂರು ಕರ್ನಾಟಕವನ್ನು ಅಖಂಡ ಕರ್ನಾಟಕವೆಂದು ನಾಮಕರಣ ಮಾಡಲಾಯಿತು.
ಅವರ ಮುಖ್ಯಮಂತ್ರಿ ಅವಧಿಯಲ್ಲಿ ಅನೇಕ ರೈತರಿಗೆ ನೀರಾವರಿ ಸೌಲಭ್ಯ ದೊರಕಿಸಿಕೊಟ್ಟರು,1975ರಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪಿಸಿದರು ಎಂದರು.
ಕಾರ್ಯಕ್ರಮವನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಉದ್ಘಾಟಿಸಿ ಮಾತನಾಡಿದ ಅವರು, ಡಿ.ದೇವರಾಜ ಅರಸುರವರು ಹಿಂದುಳಿದ ವರ್ಗಗಳ ಪರ ದಲಿತರ ಪರ ಅಲ್ಪಸಂಖ್ಯಾತರ ಬಗ್ಗೆ ಅತಿಹೆಚ್ಚು ಕೆಲಸ ಮಾಡಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ. ಭೂಸುಧಾಹರಣೆ ಕಾಯ್ದೆ ಜಾರಿಗೆ,ಬಾಲ ಕಾರ್ಮಿಕರ ನಿರ್ಮೂಲನೆ,ಜೀತಪದ್ದತಿ ಜಾರಿಗೆ,ಮಕ್ಕಳಿಗೆ ವಿಧ್ಯಾಭ್ಯಾಸ ಕುಂಠಿತವಾಗದೆ ವಸತಿನಿಲಯಗಳ ಪ್ರಾರಂಭ ಮಾಡಿ ಪಿಂಚಣಿ ವ್ಯವಸ್ಥೆ ಪ್ರಾರಂಭಿಸಿದರು,ಎಸ್ಸಿ ಎಸ್ಟಿ,ಓಬಿಸಿ ಜನಾಂಗಕ್ಕೆ ಮುಂಬಡ್ತಿಗಾಗಿ ದುಡಿದ ನಾಯಕರಾಗಿದ್ದರು ಎಂದರು.ವಸತಿನಿಲಯದ ಮೇಲ್ಚಾರಕಿ ರೇಣುಕಾ ಸ್ವಾಗತಿಸಿದರು,ಜೂನಿಯರ್ ಕಾಲೇಜು ಪ್ರಾಚಾರ್ಯರು ಮಲ್ಲಿಕಾರ್ಜುನ ಪಾಲಾಮೋರ್ ನಿರೂಪಿಸಿದರು,ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ವಂದಿಸಿದರು.ಈ ಸಂದರ್ಭದಲ್ಲಿ ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಬಿಸಿಎಂ ಕಲ್ಯಾಣಾಧಿಕಾರಿ ಅನುಸೋಯಾ ಚವ್ಹಾಣ,ನಾಗೇಂದ್ರಪ್ಪಾ,ಗಿರಿರಾಜ ಸಜ್ಜನ,ಕೆಎಂ ಬಾರಿ,ಲಕ್ಷ್ಮಣ ಆವುಂಟಿ,ಹಣಮಂತ ಪೂಜಾರಿ,ಅಮರ ಲೋಡನೂರ್,ಉಮೇಶ ಹಳಿಮನಿ,ಸಾಗರ ನಿಂಬಾಳಕರ,ಬಸವರಾಜ ಬಳಿಚಕ್ರ,ರಾಜಕುಮಾರ ಚಿಟ್ಟಾ,ಪ್ರೀಯಾದರ್ಶೀನಿ,ಹೀನಾ,ಸರಸ್ ವತಿ,ಕವಿತಾ,ದೀಪಾ,ವಿಜಯಲಕ್ಷ್ಮಿ,ಅಡು ಗೆ ಸಹಾಯಕರು,ಸಿಬ್ಬಂದಿ ವರ್ಗದವರು ಅನೇಕರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ವಸತಿನಿಲಯದ ಇಲಾಖೆಯಲ್ಲಿ ವಿಧ್ಯಾಭ್ಯಾಸ ಮಾಡಿದ 10ನೆ ತರಗತಿಯ ಮಲಿಕಾ 99ರಷ್ಟು ಪ್ರತಿಶತಃ ಅಂಕಪಡೆದ ಹಾಗೂ ಪಿಯುಸಿ ಫಲಿತಾಂಶದಲ್ಲಿ ನಾಗೇಶ್ವರಿ 94ಪ್ರತಿಶತಃ ಅಂಕ,ಪೂಜಾ ಶಂಕರ 93ಪ್ರತಿಶತಃ,ನಂದಿತಾ 89ಪ್ರತಿಶತಃ ಅಂಕಪಡೆದ ವಿಧ್ಯಾರ್ಥಿಗಳಿಗೆ ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪುಸ್ತಕವನ್ನು ಕಾಣಿಕೆಯಾಗಿ ನೀಡಿದ್ದರು.
