ಉದಯವಾಹಿನಿ ಸವದತ್ತಿ: ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಆರೋಗ್ಯ ಸೇವೆಗಳು ಹಾಗೂ ಸರ್ಕಾರದ ಯೋಜನೆಗಳ ಮಾಹಿತಿ ಅನುಷ್ಠಾನ ಬಗ್ಗೆ ಗ್ರಾಮೀಣ ಕ್ಷೇತ್ರದಲ್ಲಿ ಸಾವ೯ಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸವದತ್ತಿ ತಾಲೂಕಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾಕ್ಟರ್ ಶ್ರೀಪಾದ ಸಬನೀಸ ಅವರು ಸಲಹೆ ನೀಡಿದರು.ಹಾಗೂ ಯಾವುದೇ ಸಮಸ್ಯೆಗಳು ಕುಂದು ಕೊರತೆಗಳು ಇದ್ದರೆ ಪರಿಶೀಲಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸುವದಾಗಿ ಸಹ ಶೀಘ್ರದಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು.
ತಾಲೂಕು ಸಮುದಾಯ ಆರೋಗ್ಯ ಅಧಿಕಾರಿಗಳ ವತಿಯಿಂದ ಡಾ.ಶ್ರೀಪಾದ ಸಬನೀಸ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾ. ಅಧ್ಯಕ್ಷ ದುಂಡಪ್ಪ ಬಗಿನಾಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಂಗಣ್ಣ ಇಕ್ಬಾಲ್ ಬಾಗವಾನ ಶಿವಶಂಕರ ಭೂಷನ್ನವರ ಮಂಜುನಾಥ ವಿಶ್ವೇಶ್ವರಯ್ಯ ಹಿರೇಮಠ ಹುಲಗಪ್ಪ ಅವಟೆ ಮಂಜುಳಾ ಮೇಘಾ ಗೀತಾ ಪೋಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
