ಉದಯವಾಹಿನಿ, ಮುಂಬೈ : ಚಿತ್ರರಂಗದ ಭಾಯಿಜಾನ್ ಎಂದು ಕರೆಯಲ್ಪಡುವ ಸಲ್ಮಾನ್ ಖಾನ್ ದೇಶದ ಜನಪ್ರಿಯ ನಟರಲ್ಲಿ ಒಬ್ಬರು. ಅವರು ಒಂದು ವಾರದ ಹಿಂದೆ ಅಂದರೆ ಆಗಸ್ಟ್ ೧೪ ರಂದು ’ಬಿಗ್ ಬಾಸ್ ಓಟಿಟಿ ೨’ ರಿಯಾಲಿಟಿ ಶೋನ ಚಿತ್ರೀಕರಣ ಮುಗಿಸಿ.ಈಗ ಅವರು ನಟನೆಗೆ ಮರಳಿದ್ದಾರೆ. ಬಾಕಿ ಉಳಿದಿರುವ ಚಿತ್ರಗಳತ್ತ
ಗಮನ ಹರಿಸಲು ಪ್ರಾರಂಭಿಸಿದ್ದು ಇಂತಹ ಸಮಯದಲ್ಲಿಬಾಲಿವುಡ್ ನ ದಬಾಂಗ್ ಖಾನ್ ಸಲ್ಮಾನ್ ಖಾನ್ ಅವರ ಹೊಸ ಬೋಳು ತಲೆಯ ಲುಕ್ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿದ್ದರು. ಈ ವೇಳೆ ನಟ ಕ್ಯಾಮರಾ ಮುಂದೆ ಬಂದ ಕೂಡಲೇ ಅವರ ಲುಕ್ ನೋಡಿ ಎಲ್ಲರೂ ಬೆಚ್ಚಿಬಿದ್ದರು. ಸಲ್ಮಾನ್ ಖಾನ್ ಅವರ ಈ ಬೋಳು ತಲೆಯ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.ಹೊರಬಿದ್ದ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸಲ್ಮಾನ್ ಅವರ ಗಜನಿ ಲುಕ್ ಕಾಣಿಸುತ್ತಿದೆ. ಜನರು ಈ ಭಾಯಿಜಾನ್ ಶೈಲಿಯನ್ನು ತುಂಬಾ ಇಷ್ಟಪಡುತ್ತಿದ್ದಾರೆ.ಹೀಗಿರುವಾಗ ಸಲ್ಮಾನ್‌ನ ಈ ಲುಕ್ ಕರಣ್ ಜೋಹರ್ ಮತ್ತು ವಿಷ್ಣುವರ್ಧನ್ ಚಿತ್ರಕ್ಕೆ ಎಂದು ಜನ ಊಹಾಪೋಹ ಆರಂಭಿಸಿದ್ದಾರೆ. ಚಿತ್ರಗಳಲ್ಲಿ, ಸಲ್ಮಾನ್ ಖಾನ್ ಅಂಗರಕ್ಷಕರಿಂದ ಸುತ್ತುವರಿದಿರುವುದನ್ನು ಕಾಣಬಹುದು. ನಟ ಕಪ್ಪು ಜೀನ್ಸ್‌ನೊಂದಿಗೆ ಕಪ್ಪು ಶರ್ಟ್ ಧರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!