ಉದಯವಾಹಿನಿ, ದಿನದಲ್ಲಿ 8 ಗಂಟೆಗಳ ಕಾಲ ನಿದ್ದೆ ಆಗಿದ್ದರೂ, ರಾತ್ರಿ ಪೂರ್ತಿ ಚೆನ್ನಾಗಿ ನಿದ್ದೆ ಮಾಡಿ ಬೆಳಿಗ್ಗೆ ಆರಾಮಾಗಿ ಎದ್ದಿದ್ರೂ, ಆಗಾಗ ಆಕಳಿಕೆ ಬಂದು ದಿನವಿಡೀ ಬೇಸರ ಎನಿಸುತ್ತಾ? ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಬೇರೆಯವರ ಜೊತೆಗೆ ಮಾತನಾಡುವ ಸ್ಥಳದಲ್ಲಿ ಆಗಾಗ ಬರುವ ಆಕಳಿಕೆ ಮುಜುಗರ ಉಂಟು ಮಾಡುತ್ತಿದ್ದೀಯಾ? ರಾತ್ರಿ ಇಡೀ ನಿದ್ದೆ ಮಾಡಿಲ್ವೇನೋ ಎಂದೇ ಭಾವಿಸಬಹುದು ಆದರೆ ಆಕಳಿಕೆ ಹೀಗೆ ಪದೇ ಪದೇ ಬರುವುದಕ್ಕೆ ನಿದ್ರೆ ಆಗದೇ ಇರುವುದು ಮಾತ್ರ ಕಾರಣವಲ್ಲ. ಹಾಗಾದ್ರೆ ಆಕಳಿಕೆ ನಿರಂತರವಾಗಿ ಬರುವುದಕ್ಕೆ ಕಾರಣ ಏನು? ಇದರಿಂದ ಮುಂದೆ ಆರೋಗ್ಯಕ್ಕೆ ಏನಾದರೂ ಸಮಸ್ಯೆ ಆಗಬಹುದಾ? ಇಲ್ಲಿದೆ ಉತ್ತರ.

ನಿದ್ದೆ ಬಾರದೇ ಇದ್ದಾಗ ಅಥವಾ ನಿದ್ದೆ ಸರಿಯಾಗಿ ಆಗದೆ ಇದ್ದಾಗ ಆಕಳಿಕೆ ಬರುವುದು ಸಹಜ. ಆದಾಗ್ಯೂ ನಿದ್ದೆ ಸರಿಯಾಗಿ ಆಗಿದ್ದು ಆಗಾಗ ಆಕಳಿಕೆ ಬಂದರೆ ಅದಕ್ಕೆ ತೀವ್ರವಾಗಿರುವ ಆಯಾಸ ಒತ್ತಡ ಅಥವಾ ನೀವು ಯಾವುದಾದರೂ ಕಾಯಿಲೆಗೆ ಸೇವಿಸುವ ಔಷಧ ಮೊದಲಾದವು ಕಾರಣವಾಗಿರಬಹುದು. ಕೇವಲ ದೈಹಿಕವಾಗಿ ದಣಿದಾಗ ಮಾತ್ರವಲ್ಲ ಮಾನಸಿಕವಾಗಿ ದಣಿದಾಗಲೂ ಕೂಡ ಮತ್ತೆ ಮತ್ತೆ ಆಕಳಿಕೆ ಬರುವುದು ಸಹಜ. ಇದೇನು ಕಾಯಿಲೆ ಅಲ್ಲ ಹಾಗಾಗಿ ಚಿಂತಿಸಬೇಕಿಲ್ಲ ಆದರೂ ಬೇರೆಯವರ ಎದುರಿಗೆ ಈ ರೀತಿ ಆಗಾಗ ಆಕಳಿಕೆ ಬಂದರೆ ಮುಜುಗರ ಆಗುತ್ತೆ. ಇದನ್ನು ತಪ್ಪಿಸಲು ಇಲ್ಲಿದೆ ಕೆಲವು ತ್ವರಿತ ಪರಿಹಾರ.
ನಿರಂತರವಾಗಿ ಆಕಳಿಕೆ ಬರುತ್ತಿದ್ದರೆ ತಂಪಾದ ಪಾನೀಯ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು ಅದರಲ್ಲೂ ನಿಮಗೆ ಶೀತ ಆಗುವ ಗುಣ ಲಕ್ಷಣ ಇಲ್ಲದೆ ಇದ್ದರೆ ನೀವು ತಂಪಾಗಿರುವ ಪಾನೀಯವನ್ನು ಸೇವಿಸಬಹುದು. ಒಂದು ವೇಳೆ ಕೋಲ್ಡ್ ಪಾನೀಯ ಕುಡಿದರೆ ಆರೋಗ್ಯ ಹದಗೆಡುತ್ತದೆ ಎನ್ನುವಂತಿದ್ದರೆ ತಾಜಾ ಹಣ್ಣಿನ ರಸವನ್ನು ಸೇವನೆ ಮಾಡಿ ಇದರಿಂದ ತಕ್ಷಣ ಆಕಳಿಕೆ ನಿಲ್ಲುತ್ತದೆ. ಜೊತೆಗೆ ದೇಹದಲ್ಲಿ ಆಗಿರುವ ಸುಸ್ತು ಕೂಡ ಕಡಿಮೆಯಾಗುತ್ತದೆ. ಇದರ ಜೊತೆಗೆ ನೀವು ಹಣ್ಣನ್ನು ಕೂಡ ಸೇವಿಸಬಹುದು, ಐಸ್ ಟಿ, ಕೋಲ್ಡ್ ಕಾಫಿ, ಅಥವಾ ಬಿಸಿ ಚಹಾ ಕೂಡ ನಿಮ್ಮ ಈ ಸಮಸ್ಯೆಗೆ ತಕ್ಷಣವೇ ಪರಿಹಾರ ನೀಡುತ್ತದೆ.
ಇನ್ನು ಕೆಲವೊಮ್ಮೆ ಆಗಾಗ ಆಕಳಿಕೆ ಬರುವುದಕ್ಕೆ ಉಸಿರಾಟದ ಸಮಸ್ಯೆ ಕೂಡ ಕಾರಣವಾಗಿರುತ್ತದೆ ಹಾಗಾಗಿ ನೀವು ಸ್ವಚ್ಛಂದವಾದ ಆಮ್ಲಜನಕ ಸೇವನೆ ಮಾಡಬೇಕು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಡಬೇಕು. ಬಾಯನ್ನು ತೆರೆದು ಈ ರೀತಿ ಉಸಿರಾಟದ ಪ್ರಕ್ರಿಯೆ ನಡೆಸಿದಾಗ ರಕ್ತ ಪರಿಚಲನೆ ಕೂಡ ಸರಿಯಾಗಿ ಆಗುತ್ತದೆ. ಉಸಿರಾಟವು ಕೂಡ ಸರಾಗವಾಗಿ ಆಗುವುದರಿಂದ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದರಿಂದ ದೇಹದಲ್ಲಿರುವ ಆಯಾಸವು ಕಡಿಮೆಯಾಗಿ ಉಸಿರಾಟ ಸರಿಯಾಗಿ ಆಗುತ್ತದೆ. ಜೊತೆಗೆ ಆಕಳಿಕೆ ಕೂಡ ನಿಂತು ಹೋಗುತ್ತದೆ.ಇನ್ನು ಹೀಗೆ ಆಕಳಿಕೆ ಬರುತ್ತಲೇ ಇದ್ದರೆ ಏನು ಬೇಡ ಎನ್ನುವಂತಹ ಫೀಲಿಂಗ್ ಶುರುವಾಗಬಹುದು. ದೇಹದಲ್ಲಿ ಸೋಮಾರಿತನ ಉಂಟಾಗಬಹುದು. ಹೀಗಾದಾಗ ನೀವು ತಕ್ಷಣ ಯಾರೊಂದಿಗಾದರೂ ಚೆನ್ನಾಗಿ ಮಾತನಾಡುವುದು, ಜೋಕ್ ಗಳನ್ನು ಕೇಳಿ ಅಥವಾ ಹೇಳಿ ನಗುವುದು ಇತರರನ್ನು ನಗುಸುವುದು ಮಾಡಬೇಕು. ಕೊನೆ ಪಕ್ಷ ಆನ್ಲೈನ್ ನಲ್ಲಿ ಉತ್ತಮವಾಗಿರುವ, ನಿಮಗೆ ಇಷ್ಟವಾಗುವ ಜೋಕ್ ಅಥವಾ ಸಿನಿಮಾ ನೋಡಿ. ಈ ಟ್ರಿಕ್ ಫಾಲೋ ಮಾಡಿದ್ರೆ ತಕ್ಷಣಕ್ಕೆ ಆಕಳಿಕೆ ಬರುವುದು ನಿಂತು ಹೋಗುತ್ತದೆ. ಏನಾದ್ರೂ ಆಸಕ್ತಿದಾಯಕ ಕೆಲಸವನ್ನು ಮಾಡಬೇಕು ಆಕಳಿಕೆ ಬರುತ್ತಿರುವ ವಿಷಯವೇ ನಿಮಗೆ ಮರೆತು ಹೋಗುತ್ತದೆ ಹಾಗೂ ನೀವು ನಿಮಗೆ ಇಷ್ಟವಾದ ಕೆಲಸ ಮಾಡುವುದರಲ್ಲಿ ತಲ್ಲೀನರಾಗುತ್ತೀರಿ.

Leave a Reply

Your email address will not be published. Required fields are marked *

error: Content is protected !!