ಉದಯವಾಹಿನಿ, ಕೋಕಂ ಅಥವಾ ಪುನರ್ಪುಳಿ ಎಂದು ಕರೆಯುವ ಈ ಹಣ್ಣಿನ ಸಿಪ್ಪೆ ಆಗಾಧ ಔಷಧೀಯ ಗುಣವನ್ನು ಹೊಂದಿದೆ. ಇದರ ಜ್ಯೂಸ್ ದೇಹಕ್ಕೆ ತಂಪು. ಬೇಸಿಗೆ ಕಾಲದಲ್ಲಿ ಇದರ ಜ್ಯೂಸ್ ಮಾಡಿ ಕುಡಿದರೆ ಹಾಯೆನಿಸುತ್ತದೆ. ಅನೇಕ ಆರೋಗ್ಯ ಸಮಸ್ಯೆಗೆ ಇದು ರಾಮಬಾಣ.
ಇದರ ಹಣ್ಣುಗಳನ್ನು ತಂದು ತೊಳೆದು ಒಳಗಿನ ಬೀಜ ತೆಗೆದು ಬಿಸಿಲಿನಲ್ಲಿ ಒಣಗಿಸಿ ಒಂದು ಡಬ್ಬದಲ್ಲಿ ಶೇಖರಣೆ ಮಾಡಿಟ್ಟುಕೊಂಡರೆ ಆಗಾಗ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.ಮಾರುಕಟ್ಟೆಯಲ್ಲಿ ಇದರ ಜ್ಯೂಸ್ ಕೂಡ ಲಭ್ಯವಿದೆ. ಕೋಕಂನ ಪ್ರಯೋಜನಗಳು ಏನೆಂದು ತಿಳಿಯೋಣ.
ಕೋಕಂನಲ್ಲಿ ಹೇರಳವಾದ ಆಯಂಟಿ ಆಕ್ಸಿಡೆಂಟ್ ಇದೆ. ಇದು ಜ್ವರ, ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಜೀವಕೋಶಗಳ ಮರುಸೃಷ್ಟಿ ಹಾಗೂ ರಿಪೇರಿ ಮಾಡುವುದಕ್ಕೆ ಸಹಾಯಕಾರಿ.ಇನ್ನು ಬೇಸಿಗೆ ಕಾಲದಲ್ಲಿ ಇದರ ಜ್ಯೂಸ್ ಮಾಡಿಕೊಂಡು ಕುಡಿದರೆ ದೇಹಕ್ಕೆ ತಂಪು. ಇದು ಸನ್ ಸ್ಟ್ರೋಕ್ ಹಾಗೂ ನಿರ್ಜಲಿಕರಣವನ್ನು ಕಡಿಮೆ ಮಾಡುತ್ತದೆ.ಕೋಕಂ ಜ್ಯೂಸ್ ಕುಡಿಯುವುದರಿಂದ ಜಿರ್ಣಕ್ರೀಯೆ ಸರಾಗವಾಗಿ ಆಗುತ್ತದೆ. ಮಲಬ್ಧತೆಯನ್ನು ನಿವಾರಿಸುತ್ತದೆ.
ಕೋಕಂನಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್ ಆಯಸಿಡ್ ದೇಹದಲ್ಲಿನ ಕೊಬ್ಬಿನಾಂಶವನ್ನು ಕರಗಿಸುತ್ತದೆ ಹಾಗೂ ದೇಹದ ತೂಕವನ್ನು ಕಡಿಮೆ ಗೊಳಿಸುವಲ್ಲಿ ಇದು ಸಹಾಯಕಾರಿಯಾಗಿದೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆಯಂಟಿ ಬ್ಯಾಕ್ಟಿರಿಯಲ್ ಪ್ರಾಪರ್ಟಿಸ್ ದೇಹವನ್ನು ಸುದೃಢವಾಗಿರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!