ಉದಯವಾಹಿನಿ, ಮೂಲಂಗಿ ಒಂದು ಆರೋಗ್ಯದಾಯಕ ತರಕಾರಿ ಹಾಗೂ ಅನೇಕ ರೋಗಗಳಿಗೆ ಉತ್ತಮ ಔಷಧಿಯಾಗಿದೆ. ಆದರೆ ಕೆಲವರಿಗೆ ಮೂಲಂಗಿ ಅಂದರೆ ಅಸಡ್ಡೆ.
ಆದರೂ ಆಗಾಗ ಈ ತರಕಾರಿಯನ್ನು ಸೇವಿಸುತ್ತಿದ್ದಲ್ಲಿ ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಹಾಗೂ ಇನ್ನಿತರ ಆರೋಗ್ಯ ಲಾಭಗಳನ್ನು ಪಡೆಯಬಹುದು.
ಮೂಲಂಗಿ ಗಡ್ಡೆಯ ರಸವನ್ನು ಮಜ್ಜಿಗೆಗೆ ಸೇರಿಸಿ ಸೇವಿಸಿದರೆ ಅಜೀರ್ಣದಿಂದ ಉಂಟಾದ ಅತಿಸಾರ ಗುಣವಾಗುತ್ತದೆ.
ತರಕಾರಿಯಾಗಿ ಇದನ್ನು ತಿಂದಾಗ ಜೀರ್ಣಶಕ್ತಿ ಹೆಚ್ಚಾಗಿ ತಿಂದ ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.
ಮೂಲಂಗಿಯನ್ನು ಹಸಿಯಾಗಿ ತಿಂದಾಗ ಒಳ್ಳೆಯ ಜೀರ್ಣದಾಯಕವಾಗುತ್ತದೆ. ಇದರ ಸೊಪ್ಪನ್ನು ಸಹ ತರಕಾರಿ ರೂಪದಲ್ಲಿ ಉಪಯೋಗ ಮಾಡಿದರೆ ಆರೋಗ್ಯಕ್ಕೆ ಹಿತಕರವಾಗಿರುತ್ತದೆ.
ಮೂಲಂಗಿಯನ್ನು ಯಾವಾಗಲೂ ಎಳೆಯದಾಗಿರುವಾಗಲೇ ತಿನ್ನಬೇಕು. ಬಲಿತ ಮೂಲಂಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಮೂಲಂಗಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಒಣಗಿಸಿ ಇಟ್ಟುಕೊಳ್ಳಬೇಕು. ಹೀಗೆ ಒಣಗಿದ ಚೂರುಗಳನ್ನು ಪೊಟಲಿಯಲ್ಲಿ ಕಟ್ಟಿ ಬಿಸಿಮಾಡಿ ಶಾಖ ಕೊಟ್ಟರೆ ಕೀಲು ನೋವು ಕಡಿಮೆಯಾಗುತ್ತದೆ.
ಮೂಲಂಗಿ ಸೊಪ್ಪಿನ ರಸಕ್ಕೆ 2-3 ಚಮಚ ಜೇನುತುಪ್ಪವನ್ನು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕಾಮಾಲೆ ರೋಗ ಬೇಗನೆ ಗುಣವಾಗುತ್ತದೆ
