ಉದಯವಾಹಿನಿ, ನವದೆಹಲಿ : ಸೆಪ್ಟೆಂಬರ್ ೭ ರಿಂದ ೧೧ ರವರೆಗೆ ಮೂರು ಯುರೋಪ್ ರಾಷ್ಟ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಜ್ಜಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ ೧೦ ರಂದು ನೆದರ್ಲ್ಯಾಂಡ್ಸ್‌ನ ಲೈಡೆನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ ೧೦ ರಂದು ನೆದರ್ಲ್ಯಾಂಡ್ಸ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಕೂಡ ಇರಲಿದ್ದಾರೆ.
ಸೆಪ್ಟೆಂಬರ್ ೧೦ ರಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ರಾಹುಲ್ ಗಾಂಧಿ ಮತ್ತು ಸ್ಯಾಮ್ ಪಿತ್ರೋಡಾ ಭಾಷಣ ಮಾಡಲಿದ್ದಾರೆ
ಪಕ್ಷದ ನಾಯಕರೊಬ್ಬರ ಪ್ರಕಾರ, ರಾಹುಲ್ ಗಾಂಧಿ ಅವರು ’ವಿಶ್ವದಲ್ಲಿ ಭಾರತ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರೈವಸಿ ಗ್ರೂಪ್, ಗ್ರೋನಿಂಗನ್ ವಿಶ್ವವಿದ್ಯಾಲಯ ಮತ್ತು ಲೈಡೆನ್ ಯೂನಿವರ್ಸಿಟಿ ಸೆಂಟರ್ ಫಾರ್ ಇಂಟರ್ನ್ಯಾಷನಲ್ ರಿಲೇಶನ್ಸ್ ಜಂಟಿಯಾಗಿ ಆಯೋಜಿಸಿದೆ. ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ವಿಶ್ವದ ಉನ್ನತ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತವು ಜಗತ್ತಿಗೆ ಯಾವ ದೃಷ್ಟಿಕೋನವನ್ನು ತರುತ್ತದೆ, ಈ ವಿಷಯವನ್ನು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲಾಗುವುದು.
ಭಾರತದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ರಾಹುಲ್ ಗಾಂಧಿ ಮತ್ತು ಭಾರತದ ಸಂವಹನ ಕ್ರಾಂತಿಯ ಹಿಂದಿನ ಪ್ರಮುಖ ವ್ಯಕ್ತಿ ಸ್ಯಾಮ್ ಪಿತ್ರೋಡಾ ಅವರೊಂದಿಗಿನ ಈ ಸಂಭಾಷಣೆಯಲ್ಲಿ, ಭಾರತವು ೨೧ ನೇ ಶತಮಾನದ ವಿಶ್ವ ಕ್ರಮವನ್ನು ರೂಪಿಸುವ ವಿವಿಧ ವಿಧಾನಗಳನ್ನು ನಾವು ಚರ್ಚಿಸುತ್ತೇವೆ ಎಂದು ವಿಶ್ವವಿದ್ಯಾಲಯ ಹೇಳಿದೆ.

Leave a Reply

Your email address will not be published. Required fields are marked *

error: Content is protected !!