ಉದಯವಾಹಿನಿ, ಹೈದರಾಬಾದ್: ಚಂದ್ರಮುಖಿ-೨ ಜನಪ್ರಿಯ ನೃತ್ಯ ನಿರ್ದೇಶಕ, ನಟ ಮತ್ತು ನಿರ್ದೇಶಕ ರಾಘವ ಲಾರೆನ್ಸ್ ಮತ್ತು ಬಾಲಿವುಡ್‌ನ ಮೋಹನಾಂಗಿ ಕಂಗನಾ ರನೌತ್ ಅಭಿನಯದ ಅದ್ಧೂರಿ ಚಿತ್ರ. ಈ ಹಿಂದೆ ರಜನಿಕಾಂತ್ ಅಭಿನಯದ ಚಂದ್ರಮುಖಿ ಚಿತ್ರವನ್ನು ನಿರ್ದೇಶಿಸಿದ್ದ ಪಿ.ವಾಸು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್‌ನ ಅದ್ಧೂರಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ವಿನಾಯಕ ಚತುರ್ಥಿಗೆ ಸಂದರ್ಭದಲ್ಲಿ ಸೆಪ್ಟೆಂಬರ್ ೧೫ ರಂದು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ. ತೆಲುಗು ರಾಜ್ಯಗಳಲ್ಲಿ ’ಚಂದ್ರಮುಖಿ ೨’ ಚಿತ್ರ ರಾಧಾಕೃಷ್ಣ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಉಪ್ಪುತುರಿ ಮತ್ತು ವೆಂಕಟ ರತ್ನಂ ಸಖಮುರಿ ಅವರಿಂದ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ತುಂಬಾ ಆಸಕ್ತಿದಾಯಕವಾಗಿದೆ.

ಚಂದ್ರಮುಖಿ-೨ ಚಿತ್ರವು ಥ್ರಿಲ್ಲರ್‌ನ ಎಲ್ಲಾ ಅಂಶಗಳನ್ನು ಹೊಂದಿದೆ ಎಂದು ಟ್ರೇಲರ್ ಹೇಳುತ್ತದೆ.
೧೭ ವರ್ಷಗಳ ಹಿಂದೆ ಚಂದ್ರಮುಖಿ ತಾನು ಬಂಧಿಯಾಗಿದ್ದ ಕೋಣೆಯ ಬಾಗಿಲು ತೆರೆದು ವೆಟ್ಟಯ್ಯ ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿ ವಿಫಲಳಾಗಿದ್ದಳು. ಇಷ್ಟು ವರ್ಷಗಳ ನಂತರ ಈಗ ತನ್ನ ಸೇಡು ತೀರಿಸಿಕೊಳ್ಳಲು ಬರುತ್ತಿದ್ದಾಳೆ. ಯಾವಾಗ… ಎಲ್ಲಿ… ಹೇಗೆ ಎಂದು ತಿಳಿಯಲು ಸೆಪ್ಟೆಂಬರ್ ೧೫ರವರೆಗೆ ಕಾಯಲೇಬೇಕು ಎನ್ನುತ್ತಾರೆ ನಿರ್ಮಾಪಕರು.
ಇದರಲ್ಲಿ ರಾಘವ ಲಾರೆನ್ಸ್ ಎರಡು ಶೇಡ್ ನಲ್ಲಿ ಮನಸೂರೆಗೊಂಡಿದ್ದಾರೆ. ಒಂದು ಸ್ಟೈಲಿಶ್ ಲುಕ್ ಮತ್ತು ಇನ್ನೊಂದು ವೆಟ್ಟಯ ರಾಜ ಲುಕ್. ಚಂದ್ರಮುಖಿ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದಾರೆ. ಸ್ಟಾರ್ ಕಾಮಿಡಿಯನ್ ವಡಿವೇಲು ಬಸವಯ್ಯನ ಪಾತ್ರದಲ್ಲಿ ತಮ್ಮದೇ ಆದ ಹಾಸ್ಯದ ಮೂಲಕ ಇಂಪ್ರೆಸ್ ಮಾಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!