ಉದಯವಾಹಿನಿ, ಕೋಲಾರ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುವ ಮೂಲಕ ಯಾದವ ಸಮುದಾಯದ ಸಂಘಟನೆ ಹಾಗೂ ಒಗ್ಗಟ್ಟನ್ನು ಸಾಕ್ಷೀಕರಿಸೋಣ ಎಂದು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ ಕರೆ ನೀಡಿದರು.
ನಗರದ ಜಿಲ್ಲಾ ಯಾದವ ಸಮುದಾಯ ಭವನದಲ್ಲಿ ತಮ್ಮ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಮುದಾಯದ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ರಾಜ್ಯಮಟ್ಟದ ಕಾರ್ಯಕ್ರಮ ಬೆಂಗಳೂರಿನಲ್ಲಿ ಇರುವುದರಿಂದ ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾವು ಭಾಗವಹಿಸಬೇಕಾಗಿದೆ ಆದ ಕಾರಣ ಕೋಲಾರದಲ್ಲಿ ಜಿಲ್ಲಾಮಟ್ಟದ ಕಾಯಕ್ರಮದ ದಿನ ಬದಲಾವಣೆಗೆ ಮನವಿ ಮಾಡಿದ್ದಾಗಿ ತಿಳಿಸಿದರು.
ಇಡೀ ಸಮುದಾಯ ಒಗ್ಗಟ್ಟಾಗಿ ಈ ಕಾಯಕ್ರಮದಲ್ಲಿ ಪಾಲ್ಗೊಳ್ಳಬೇಕು, ಇಲ್ಲಿ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಆಶಯ ನನ್ನದಾಗಿದೆ, ಸಮುದಾಯದ ಹಿರಿಯರು ನನಗೆ ಮಾರ್ಗದರ್ಶನ ನೀಡಿ, ಎಲ್ಲರೂ ಜತೆಯಾಗಿ ಕಾರ್ಯಕ್ರಮ ಮಾಡೋಣ, ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲದಂತೆ ಮುನ್ನಡೆದು ಸಮಾಜಕ್ಕೆ ಉತ್ತಮ ಸಂದೇಶ ನೀಡೋಣ ಎಂದರು.
ಜಿಲ್ಲೆಯ ೨೬ ಗ್ರಾಮಗಳಿಂದ ಕೃಷ್ಣನ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ಸಂಭ್ರಮದಿಂದ ಮೆರವಣಿಗೆ ನಡೆಸೋಣ ಯಾದವ ಸಮುದಾಯದ ಸಂಘಟನೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಲಿ ಎಂದರು.
ನಗರದ ಯಾದವ ಸಮುದಾಯದ ಭವನದ ಮುಂಭಾಗ ಅಂದು ಬೆಳಗ್ಗೆ ೯ ಗಂಟೆಗೆ ಮೆರವಣಿಗೆಗೆ ಯಾದವ ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಚಾಲನೆ ನೀಡಲಿದ್ದು ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ನಾಗರಾಜ ಯಾದವ್, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕಿ ಪೂರ್ಣಿಮಾ, ಕೆಪಿಸಿಸಿಯ ಡಿ.ಕೆ.ಮೋಹನ್ ಬಾಬು, ಭಾಗವಹಿಸಲಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಎಸ್ಪಿನಾರಾಯಣ, ಜಿಪಂ ಸಿಇಒ ಪದ್ಮಬಸವಂತಪ್ಪರನ್ನು ಆಹ್ವಾನಿಸುತ್ತಿರುವುದಾಗಿ ತಿಳಿಸಿದರು.
ಯಾದವ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಶ್ರೀನಿವಾಸಯಾದವ್, ಹಿರಿಯ ಮುಖಂಡ ಮುಕ್ಕಡ್ ವೆಂಕಟೇಶ್, ಯಾದವ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾಥ್, ನಿವೃತ್ತ ಪಿಡಿಒ ನಾಗರಾಜ್, ಮುಖಂಡರಾದ ಅಮ್ಮೇರಹಳ್ಳಿ ಮಂಜುನಾಥ್, ಕಿಲಾರಿಪೇಟೆ ಮಣಿ ಮತ್ತಿತರರು ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದರು.
ಕಿಲಾರಿಪೇಟೆ ಮುನಿವೆಂಕಟಯಾದವ್, ಮನೋಜ್ ಯಾದವ್, ಕ್ಯಾಪ್ಟನ್ ಮಂಜು, ಕೋಲಾರಮ್ಮ ಡ್ರೈವಿಂಗ್ ಸ್ಕೂಲ್‌ನ ನಿತೀಶ್ ಯಾದವ್, ಪ್ರಶಾಂತ್, ಕೊಂಡರಾಜನಹಳ್ಳಿ ನವೀನ್ ಕುಮಾರ್, ಜೀವನ್ ಮತ್ತಿತರರು ಹಾಜರಿದ್ದು ಶುಭ ಕೋರಿದರು.
