ಉದಯವಾಹಿನಿ, ವಾಷಿಂಗ್ಟನ್: ೨೦೨೦ರಲ್ಲಿ ನಡೆದ ಕ್ಯಾಪಿಟಲ್ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸಲು ನಿರಾಕರಣಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭ ಶ್ವೇತಭವನದ ಸಲಹೆಗಾರನಾಗಿದ್ದ ಪೀಟರ್ ನವಾರೊ ವಿರುದ್ಧ ಎರಡು ಕೌಂಟ್‌ಗಳ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕೌಂಟ್‌ಗೂ ಕೂಡ ನವಾರೊ ತಲಾ ಒಂದೊಂದು ವರ್ಷದ ಜೈಲುಸಜೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣದ ತನಿಖೆಯಲ್ಲಿ ಸಹಕರಿಸುತ್ತಿಲ್ಲ. ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯನ್ನು ಧಿಕ್ಕರಿಸಿ ತಾನು ಕಾನೂನಿಗಿಂತ ಮೇಲು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಪ್ರಕರಣದ ಅಭಿಯೋಜಕರು ಆರೋಪಿಸಿದ್ದರು. ೨೦೨೦ರ ಜನವರಿ ೬ರಂದು ನಡೆದ ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂಸದೀಯ ಸಮಿತಿಯ ಎದುರು ವಾದ ಮಂಡಿಸಿದ ಅಭಿಯೋಜಕ(ವ್ಯಾಜ್ಯದಾರ) ಜಾನ್ ಕ್ರ್ಯಾಬ್, ೨೦೨೧ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬ ಟ್ರಂಪ್ ಅವರ ಆಧಾರರಹಿತ ಪ್ರತಿಪಾದನೆಯನ್ನು ನವಾರೊ ಪುನರುಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!