ಉದಯವಾಹಿನಿ, ನ್ಯೂಯಾರ್ಕ್: ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ನಟ ಡ್ಯಾನಿ ಮಾಸ್ಟರ್‌ಸನ್ ವಿರುದ್ಧ ಆರೋಪ ಸಾಬೀತಾಗಿದ್ದು, ಬರೊಬ್ಬರಿ ೩೦ ವರ್ಷಗಳ ಜೈಲುಸಜೆ ವಿಧಿಸಲಾಗಿದೆ.
ಚರ್ಚ್ ಆಫ್ ಸೈಂಟಾಲಜಿಯ ಸದಸ್ಯರಾದ ಮಾಸ್ಟರ್‌ಸನ್ ಅವರು ೧೯೯೮ ರಿಂದ ೨೦೦೬ ರ ಅವಧಿಯಲ್ಲಿ ಪ್ರಸಾರವಾದ ಸೂಪರ್ ಹಿಟ್ ಹಾಸ್ಯ ಧಾರವಾಹಿ “ದಟ್ ೭೦ ರ ಶೋ” ನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರೀ ಪ್ರಚಾರ ಪಡೆದುಕೊಂಡಿದ್ದರು. ಆದರೆ ೨೦೧೭ರಲ್ಲಿ ಮಾಸ್ಟರ್‌ಸನ್ ವಿರುದ್ಧ ಮೊದಲ ಬಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ೨೦೨೦ರಲ್ಲಿ ತನಿಖೆ ಪ್ರಾರಂಭವಾಗಿತ್ತು. ಬಳಿಕ ಹಾಲಿವುಡ್ ಹಿಲ್ಸ್‌ನ ಮನೆಯಲ್ಲಿ ಮಾಜಿ ಗೆಳತಿ ಸಹಿತ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣವನ್ನು ಮಾಸ್ಟರ್‌ಸನ್ ಮೇಲೆ ಹೊರಿಸಲಾಗಿತ್ತು. ಈ ಮೂವರು ಮಹಿಳೆಯರು ಚರ್ಚ್ ಆಫ್ ಸೈಂಟಾಲಜಿ ಮೂಲಕ ಮಾಸ್ಟರ್‌ಸನ್ ಅವರ ಪರಿಚಯವಾಗಿತ್ತು. ದೌರ್ಜನ್ಯ ನಡೆಸುವ ಮುನ್ನ ಮಹಿಳೆಯಗೆ ಮಾಸ್ಟರ್‌ಸನ್ ಡ್ರಗ್ಸ್ ನೀಡಿದ್ದ ಎನ್ನಲಾಗಿದೆ.

 

Leave a Reply

Your email address will not be published. Required fields are marked *

error: Content is protected !!