ಉದಯವಾಹಿನಿ, ಪ್ಯಾರಿಸ್: ಭಾರತೀಯ ಪ್ರಜಾಪ್ರಭುತ್ವಕ್ಕೆ ಅಪಾಯದಲ್ಲಿದೆ.ಅದರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೋರಾಡಲು ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ನೀತಿಯ ವಿರುದ್ದ ಒಗ್ಗೂಡಿ ಹೋರಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿವಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಪ್ಯಾರಿಸ್‌ನ ವಿಜ್ಞಾನ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳ ಮೇಲಿನ ದಾಳಿ ತಡೆಯಬಹುದೇ ಮತ್ತು ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದರೆ ಈ ವಿಷಯದ ಬಗ್ಗೆ ಅವರ ಯೋಜನೆ ಎನ್ನುವ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ಅಲ್ಪ ಸಂಖ್ಯಾತರು, ದುರ್ಬಲ ವರ್ಗದ ಮಂದಿಯ ಬಗ್ಗೆ ಪ್ರಧಾನಿಯಾದವರು ಎದೆಗುಂದುವುದಿಲ್ಲ ಎಂದು ನಿರ್ಧರಿಸಿದರೆ, ಹಿಂಸೆ,ನಿಲ್ಲುತ್ತದೆ. ದೇಶದ ನಾಯಕತ್ವ ನೀಡುವ ನಿರ್ದೇಶನವೇ ಜನರನ್ನು ರೂಪಿಸುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!