ಉದಯವಾಹಿನಿ, ಹೊಸಪೇಟೆ : ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ತ್ರೈತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿವತಿಯಿಂದ ಸ್ಥಳೀಯ ಪಟೇಲ್ ನಗರದ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಶ್ರೀ ಕೃಷ್ಣ ಪ್ರತಿಮೆ ಮೆರವಣಿಗೆ ನಡೆಯಿತು.
ಭಗವಂತ ಮಾನವನಾಗಿ ಅವತರಿಸಿ ಮಾನವನಾಗಿ ಜನ್ಮ ತಾಳಿದರೆ ಆತನನ್ನು ದೇವರು ಎನ್ನುತ್ತೇವೆ. ಅಂತಹ ದೇವರನ್ನು ಶ್ರೀ ಕೃಷ್ಣ ಎಂದು ಕರೆಯುತ್ತೇವೆ. ಆತನನ್ನು ಮಾತ್ರ ಎಲ್ಲರೂ ಪರಮಾತ್ಮನೆಂದು ಗುರುತಿಸಬೇಕು ಎಂದು ವೇದಿಕೆ ವೀರಯ್ಯ ಪಲ್ಲಿ ತಿಳಿಸಿದರು.
ಯುವ ಮುಖಂಡ ಸಿದ್ದಾರ್ಥ ಸಿಂಗ್, ಹೊಸಪೇಟೆ ಸಮಿತಿ ಸದಸ್ಯರಾದ ಶ್ರೀದೇವಿ, ರಾಘವೇಂದ್ರ ಶ್ರೇಷ್ಠಿ, ಲಕ್ಷ್ಮೀ ರೆಡ್ಡಿ, ಶ್ರೀನಿವಾಸುಲು, ಕೃಷ್ಣ, ಸುಧಾಕರ, ಅರುಣಾ ಹಾಗೂ ಕೃಷ್ಣವೇಣಿ, ಭಾಗವಹಿಸಿದ್ದರು.
