ಉದಯವಾಹಿನಿ, ೧. ಹಾವು ಕಚ್ಚಿದೊಡನೆ ಅದರ ವಿಷವು ರಕ್ತದೊಡನೆ ಸೇರಿ ಮೇಲಕ್ಕೇರದಂತೆ ಒಂದು ಹಗ್ಗ ಅಥವಾ ಬಟ್ಟೆಯ ಮೂಲಕ ಕಚ್ಚಿದ ಸ್ಥಳಕ್ಕಿಂತ ಮೇಲೆ ಕಟ್ಟಬೇಕು. ನಂತರ ಪೊಟ್ಯಾಷಿಯಂ ಪರ್‍ಮಾಂಗನೇಟ್ ಅನ್ನು ನೀರಿನಲ್ಲಿ ಕಲಸಿ ಕಡಿದಿರುವ ಭಾಗವನ್ನು ತೊಳೆಯಬೇಕು ಅಥವಾ ಬರೀ ಬಿಸಿ ನೀರಿನಿಂದ ತೊಳೆಯುತ್ತಿರಬೇಕು.
೨. ನೇರಳೆ ಮರದ ೪ ಎಲೆಯನ್ನು ನುಣ್ಣಗೆ ಅರೆದು ಕುಡಿಸಿದರೆ ಹಾವಿನ ವಿಷ ಕಡಿಮೆ ಆಗುತ್ತದೆ.
೩. ಬೇರು ಸಹಿತವಾಗಿ ಕಿತ್ತು ತಂದ ಕಿರುಕಸಾಲೆ ಸೊಪ್ಪನ್ನು ಅಕ್ಕಿ ತೊಳೆದ ನೀರಿನಲ್ಲಿ ಚೆನ್ನಾಗಿ ಅರೆದು ರಸ ತೆಗೆದು ಶೋಧಿಸಿ ೫ – ೫ ನಿಮಿಷಕ್ಕೆ ಒಮ್ಮೆ ೨ – ೨ ಚಮಚ ರಸ ಕುಡಿಸುತ್ತಾ ಇದ್ದರೆ ಹಾವಿನ ವಿಷ ಇಳಿಯುತ್ತದೆ.
೪. ಹಾಗಲಕಾಯಿ ರಸವನ್ನು ಹಾವು ಕಚ್ಚಿದವರಿಗೆ ಕುಡಿಸಿದರೆ ತಕ್ಷಣ ವಾಂತಿಯಾಗಿ ವಿಷವೆಲ್ಲಾ ಹೊರಕ್ಕೆ ಬರುತ್ತದೆ. ಸ್ವಲ್ಪ ಹೊತ್ತಿನಲ್ಲಿ ಚೇತರಿಸಿಕೊಳ್ಳುತ್ತಾರೆ.
೫. ತುಳಸಿ, ಕಾಳುಮೆಣಸು ಎರಡನ್ನೂ ಚೆನ್ನಾಗಿ ಅರೆದು ತಿನ್ನಿಸಬೇಕು ಅಥವಾ ನೀರಿನಲ್ಲಿ ಕದಡಿ ಕುಡಿಸಬೇಕು. ಜೊತೆಗೆ ತುಳಸಿ ರಸವನ್ನು ಕಚ್ಚಿದ ಭಾಗಕ್ಕೆ ಹನಿಹನಿಯಾಗಿ ಹಾಕುತ್ತಿರಬೇಕು, ಇದರಿಂದ ವಿಷ ಏರುವುದಿಲ್ಲ.
೬. ಹಾವು ಕಚ್ಚಿದ ತಕ್ಷಣ ಕಚ್ಚಿದ ಜಾಗಕ್ಕೆ ಮೂತ್ರ ವಿಸರ್ಜನೆ ಮಾಡಿ ಸ್ವಮೂತ್ರವನ್ನು ಸ್ವಲ್ಪ ಕುಡಿಯುವುದರಿಂದ ತಕ್ಷಣಕ್ಕೆ ಅನುಕೂಲವಾಗುತ್ತದೆ.
೭. ಸರ್ಪ ಕಚ್ಚಿದ ತಕ್ಷಣ ಚಾಕುವಿನಿಂದ ಸ್ವಲ್ಪ ಭಾಗವನ್ನು ಇರಿದು ಸ್ವಲ್ಪ ರಕ್ತವನ್ನು ಹೊರಗೆ ತೆಗೆಯಬೇಕು. ನಂತರ ಪರಂಗಿಕಾಯಿಯನ್ನು ಬಿಲ್ಲೆಗಳಾಗಿ ಕತ್ತರಿಸಿ ಅದರ ಮೇಲೆ ಸ್ವಲ್ಪ ಉಪ್ಪನ್ನು ಉದುರಿಸಿ ಆ ಜಾಗಕ್ಕೆ ಒಂದೊಂದೇ ಪರಂಗಿಯ ಬಿಲ್ಲೆಗಳನ್ನು ಇಡುತ್ತಿರಬೇಕು, ಇದರಿಂದ ವಿಷವು ಇಳಿಯುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ.
