ಉದಯವಾಹಿನಿ, ಮೊರಾಕ್ಕೊ : ಆರು ದಶಕಗಳಲ್ಲೇ ಅತ್ಯಂತ ಭೀಕರ ಭೂಕಂಪ ಸಂಭವಿಸಿರುವ ಮೊರಾಕ್ಕೊಗೆ ಸದ್ಯ ವಿದೇಶಿ ರಕ್ಷಣಾ ಕಾರ್ಯಾಚರಣೆಗಳ ತಂಡ ಆಗಮಿಸಿದೆ. ಈ ನಡುವೆ ಭೀಕರ ಭೂಕಂಪದಲ್ಲಿ ಮೃತರ ಸಂಖ್ಯೆ ೨೯೦೦ ದಾಟಿದ್ದು, ೨೫೦೦ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಇನ್ನು ಗಾಯಾಳುಗಳ ಕಟ್ಟಡಗಳ ಅವಶೇಷಗಳಡಿಯಲ್ಲಿ ಬದುಕುಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಲತ್ ನ್ಯಾಕೋಬ್‌ನ ವಿಪತ್ತು ಪೀಡಿತ ಸಮುದಾಯದಲ್ಲಿ ೧೨ ಆಂಬ್ಯುಲೆನ್ಸ್‌ಗಳು, ಸೈನ್ಯ ಮತ್ತು ಪೊಲೀಸರನ್ನು ನಿಯೋಜಿಸಲಾಗಿದ್ದು, ಸುಮಾರು ೧೦೦ ಮೊರೊಕನ್ ರಕ್ಷಕರು ಕುಸಿದ ಕಟ್ಟಡಗಳಲ್ಲಿ ಬದುಕುಳಿದವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಮೊರಾಕ್ಕೊ ಪರಿಹಾರ ಕಾರ್ಯಾಚರಣೆಯಲ್ಲಿ ಸ್ಪೇನ್, ಬ್ರಿಟನ್ ಹಾಗೂ ಕತಾರ್ ನಿಂದ ಆಗಮಿಸಿದ ತಂಡಗಳು ನಿರಂತರ ಪ್ರಯತ್ನ ಮುಂದುವರಿಸಿವೆ. ಹೈ ಅಟ್ಲಾಸ್ ಪರ್ವತ ಶ್ರೇಣಿಯಲ್ಲಿ ಶುಕ್ರವಾರ ಸಂಭವಿಸಿದ ೬.೮ ತೀವ್ರತೆಯ ಭೂಕಂಪದಿಂದಾಗಿ ಅಪಾರ ಸಾವು ನೋವು ಸಂಭವಿಸಿದೆ. ಅಧಿಕೃತ ಟಿವಿ ವರದಿಯ ಪ್ರಕಾರ ೨೮೬೨ ಮಂದಿ ಮೃತಪಟ್ಟಿದ್ದು, ೨೫೬೨ ಮಂದಿ ಗಾಯಗೊಂಡಿದ್ದಾರೆ. ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ ಮನೆಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವವರು ಬದುಕಿ ಉಳಿದಿರುವ ಸಾಧ್ಯತೆ ಕಡಿಮೆ ಎಂದು ಪರಿಹಾರ ತಂಡಗಳು ಹೇಳಿವೆ. ತಲತ್ ಎನ್ ಯಾಕೂಬ್ ಪ್ರದೇಶದಲ್ಲಿ ವ್ಯಾಪಕ ಹಾನಿ ಮತ್ತು ಸಾವು ನೋವು ಸಂಭವಿಸಿದ್ದು, ಮನೆಯ ಛಾವಣಿ ಕುಸಿದು ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!