ಉದಯವಾಹಿನಿ, ಬೀದರ: ನಗರದ ಗಣೇಶ ಮೈದಾನದಲ್ಲಿರುವ ಗಣೇಶ ಅಷ್ಟವಿನಾಯಕ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ ಆಚರಣೆ ಮಾಡಲಾಯಿತು. ತನ್ನಿಮಿತ್ತ ಅಷ್ಟವಿನಾಯಕನಿಗೆ ಮೋದಕ ಸಮರ್ಪಣೆ ಮಾಡಲಾಯಿತು. ಅಷ್ಟವಿನಾಯಕ ಮಹಿಳಾ ಮಂಡಳದ ವತಿಯಿಂದ ಪ್ರತೀ ವರ್ಷ ಬ್ರಹ್ಮೋತ್ಸವ ಆಚರಣೆ ಮಾಡಲಾಗುತ್ತಿದ್ದು, ಕಳೆದ ವರ್ಷ 56 ರೀತಿಯ ಭೋಜನ ಸಮರ್ಪಣೆ ಮಾಡಲಾಗಿತ್ತು, ಈ ಬಾರಿ ಮೋದಕ ಸಮರ್ಪಣೆ ಮಾಡಲಾಗಿದೆ ಎಂದು ಮಂಡಳಿ ಸದಸ್ಯರಾದ ಶ್ರೀಮತಿ ನಳಿನಿ ರಾಜಶೇಖರ ಪಾಟೀಲ ತಿಳಿಸಿದರು.
ಬೆಳಿಗ್ಗೆ 8 ಗಂಟೆಯಿಂದ ಅಷ್ಟವಿನಾಯಕನಿಗೆ ಪೂಜೆ, ಅಭಿಷೇಕ ಮತ್ತು ಬಿಲ್ವಾರ್ಚನೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಉತ್ಸವ ಜರುಗಿತು. ನಂತರ 11 ಗಂಟೆಗೆ ಹೋಮ ಹವನ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಹಾಮಂಗಳಾರತಿ ಬಳಿಕ ಮಹಾಪ್ರಸಾದ ಜರುಗಿತು.
