ಉದಯವಾಹಿನಿ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಮೂವರು ವೀರ ಯೋಧರನ್ನು ಬಲಿಪಡೆದ ಪ್ರತೀಕಾರಕ್ಕೆ ಭದ್ರತಾ ಪಡೆಗಳು ಇಬ್ಬರು ಲಷ್ರ್ಕ-ಎ-ತೊಯ್ಬಾ ಭಯೋತ್ಪಾದಕರನ್ನು ಸುತ್ತುವರೆದಿವೆ. ಈ ಕುರಿತು ಕಾಶ್ಮೀರ ವಲಯ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮುನ್ನಡೆಯುತ್ತಿದ್ದ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್‌ಆಶಿಶ್ ಧೋನಕ್ ಮತ್ತು ಡಿಎಸ್ಪಿ ಹುಮಾಯೂನ್ ಭಟ್ ಅವರ ಅಚಲ ಶೌರ್ಯಕ್ಕೆ ಗೌರವಪೂರ್ವಕ ಶ್ರದ್ಧಾಂಜಲಿ. ಉಝೈರ್ ಖಾನ್ ಸೇರಿದಂತೆ ಇಬ್ಬರು ಎಲಇಟಿ ಭಯೋತ್ಪಾದಕರನ್ನು ಸುತ್ತುವರೆದಿದ್ದು ನಮ್ಮ ಪಡೆಗಳು ಅಚಲವಾದ ಸಂಕಲ್ಪದೊಂದಿಗೆ ಮುಂದುವರಿಯುತ್ತಿವೆ ಎಂದಿದ್ದಾರೆ.
ಮತ್ತೊಂದೆಡೆ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂರ್ಟ ನಡೆದ ಅನಂತ್ನಾಗ್ನ ಕೋಕರ್ನಾಗ್ ಪ್ರದೇಶದ ದೃಶ್ಯಗಳು ಮತ್ತು ಹುತಾತ್ಮ ಡಿಎಸ್ಪಿ ಹುಮಾಯೂನ್ ಭಟ್ ನಿವಾಸದ ದೃಶ್ಯಗಳು ಸಿಕ್ಕಿವೆ. ಬುದ್ಗಾನ್ನಲ್ಲಿ ಡಿಎಸ್ಪಿ ಹುಮಾಯೂನ್ ಮುಝಮ್ಮಿಲ್ ಭಟ್ ಅಂತ್ಯಕ್ರಿಯೆ ನೆರವೇರಿದೆ.
