ಉದಯವಾಹಿನಿ, ಸಿಯುಡಾಡ್ ಮಡೆರೊ : ಉತ್ತರ ಮೆಕ್ಸಿಕೊದಲ್ಲಿ ಸಾಮೂಹಿಕ ಪ್ರಾರ್ಥನೆಯ ವೇಳೆ ಚರ್ಚ್‍ನ ಮೇಲ್ಛಾವಣಿ ಕುಸಿದು ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಛಾವಣಿ ಕುಸಿತದ ಸಮಯದಲ್ಲಿ ಸುಮಾರು 100 ಜನರು ಚರ್ಚ್‍ನಲ್ಲಿದ್ದರು ಎಂದು ತಮೌಲಿಪಾಸ್ ರಾಜ್ಯ ಪೊಲೀಸರು ತಿಳಿಸಿದ್ದಾರೆ.
ಭದ್ರತಾ ವಕ್ತಾರರ ಕಚೇರಿ ಘಟನೆಯಲ್ಲಿ ಒಂಬತ್ತು ಜನರು ಕುಸಿತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು, ಇದು ರಚನಾತ್ಮಕ ವೈಪಲ್ಯದಿಂದ ಉಂಟಾಗಿರಬಹುದು ಎಂದು ವಿವರಿಸಿದೆ. ರಾಷ್ಟ್ರೀಯ ಗಾರ್ಡ್, ರಾಜ್ಯ ಪೊಲೀಸ್ ಮತ್ತು ರಾಜ್ಯ ನಾಗರಿಕ ರಕ್ಷಣಾ ಕಚೇರಿ ಮತ್ತು ರೆಡ್‍ಕ್ರಾಸ್‍ನ ಘಟಕಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ ಎಂದು ತಮೌಲಿಪಾಸ್ ರಾಜ್ಯ ಪೊಲೀಸರು ತಿಳಿಸಿದ್ದಾರೆ.
