ಉದಯವಾಹಿನಿ, ಕೈರೋ : ಪ್ಯಾಲೆಸ್ತೀನಿಯರಿಗೆ ಪ್ರತ್ಯೇಕ ದೇಶವೊಂದೇ ಪರಿಹಾರವಾಗಿದ್ದು, ಅಲ್ಲಿನ ನಾಗರಿಕರ ಬಲವಂತದ ಸ್ಥಳಾಂತರವನ್ನು ತಿರಸ್ಕರಿಸುವುದಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಹೇಳಿದ್ದಾರೆ. ಅವರು ಕೈರೋದಲ್ಲಿ ನಡೆದ ಅರಬ್ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದರು. ಆದರೆ ಅಚ್ಚರಿಯ ರೀತಿ ಎಂಬಂತೆ ಶೃಂಗಸಭೆಯಲ್ಲಿ ಯಾವುದೇ ಜಂಟಿ ಹೇಳಿಕೆ ಹೊರಬಂದಿಲ್ಲ.
ಹಾಗಾಗಿ ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನದಲ್ಲಿ ಅರಬ್ ದೇಶಗಳಲ್ಲೂ ಕೂಡ ಒಗ್ಗಟ್ಟು ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗಾಜಾದ ೨೩ ಲಕ್ಷ ಮಂದಿ ಪ್ಯಾಲ್ತೇಸ್ತೀನಿಯರನ್ನು ಸಿನಾಯ್ ಪರ್ಯಾಯ ದ್ವೀಪಕ್ಕೆ ಬಲವಂತವಾಗಿ ಸ್ಥಳಾಂತರಿಸುವ ಸಂಬಂಧ ಯಾವುದೇ ಮಾತುಕತೆಯ ಪ್ರಸ್ತಾವವನ್ನು ತಿರಸ್ಕರಿಸಲಾಗುವುದು. ರಫಾ ಕ್ರಾಸಿಂಗ್ ಮೂಲಕ ಪ್ಯಾಲೆಸ್ತೀನಿಯರನ್ನು ಈಜಿಪ್ಟ್‌ಗೆ ಸ್ಥಳಾಂತರಿಸುವುದನ್ನು ನಾನು ಒಪ್ಪುವುದಿಲ್ಲ ಎಂದು ಸಿಸಿ ತಿಳಿಸಿದರು. ಸಿಸಿ ಅವರ ಹೇಳಿಕೆಗೆ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ ಕೂಡ ಧ್ವನಿಗೂಡಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಆಕ್ರಮಿತ ಪಶ್ಚಿಮ ದಂಡೆಯ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಹೊಂದಿರುವ ಪ್ಯಾಲೆಸ್ತೀನ್ ಪ್ರಾಧಿಕಾರದ ಮುಖ್ಯಸ್ಥ ಮಹಮೂದ್ ಅಬ್ಬಾಸ್, ಪ್ಯಾಲೆಸ್ಟೀನಿಯರನ್ನು ಬಲವಂತವಾಗಿ ಸ್ಥಳಾಂತರಿಸಲು ಸಾಧ್ಯವಿಲ್ಲ.
