ಉದಯವಾಹಿನಿ, ವಾಶಿಂಗ್ಟನ್ : ಇಸ್ರೇಲ್ ಹಾಗೂ ಸೌದಿ ಅರೇಬಿಯಾ ನಡುವಿನ ಬಾಂಧವ್ಯಗಳ ಬೆಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ಡೆಮಾಕ್ರಾಟ್ ಪಕ್ಷದ ನಿಧಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೌದಿ ಜೊತೆಗೆ ಇಸ್ರೇಲ್ ಸಂಧಾನ ಮಾತುಕತೆ ನಡೆಸುವುದನ್ನು ತಡೆಯುವುದು ಹಮಾಸ್ ಈ ಕೃತ್ಯವನ್ನು ನಡೆಸಲು ಇರುವ ಒಂದು ಕಾರಣವಾಗಿದೆ. .ಸೌದಿ ಆರೇಬಿಯವು ಇಸ್ರೇಲ್‌ಗೆ ಮಾನ್ಯತೆ ನೀಡಲು ಬಯಸಿತ್ತು, ಆ ಮೂಲಕ ಮಧ್ಯಪ್ರಾಚ್ಯವನ್ನು ಒಗ್ಗೂಡಿಸಲು ಆಶಿಸಿತ್ತು ಎಂದವರು ಹೇಳಿದರು.
ಇನ್ನು ಸದ್ಯದ ಕದನದಿಂದ ಸದ್ಯ ಇಸ್ರೇಲ್ ಜೊತೆಗಿನ ಸೌದಿ ಅರೇಬಿಯಾವು ತನ್ನ ಸಂಬಂಧವನ್ನು ಮತ್ತಷ್ಟು ಮುಂದೆ ಹೋಗುವ ಕಾರ್ಯದಲ್ಲಿ ಕೊಂಚ ಬ್ರೇಕ್ ಹಾಕಿದೆ ಎನ್ನಲಾಗಿದೆ. ಇದಕ್ಕೆ ಪುರಾವೆ ಎಂಬಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಈ ತಿಂಗಳ ೧೪ರಂದು ರಿಯಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೌದಿ ಅಧಿಕಾರಿಗಳು ಹೇಳಿಕೆಯೊಂದನ್ನು ನೀಡಿ ಇಸ್ರೇಲ್ ಜೊತೆಗೆ ಬಾಂಧವ್ಯಗಳನ್ನು ಸಹಜಗೊಳಿಸುವ ಕುರಿತಾದ ಮಾತುಕತೆಗಳನ್ನು ಅಮಾನತಿನಲ್ಲಿಡಲಾಗುವುದೆಂದು ಘೋಷಿಸಿದ್ದರು.
