ಉದಯವಾಹಿನಿ, ಹೈದರಾಬಾದ್: ಹನ್ಸಿಕಾ ಮೋಟ್ವಾನಿ ಬುರ್ಜ್ ಖಲೀಫಾ ವೀಕ್ಷಿಸಿ ಖುಷಿಪಟ್ಟಿದ್ದಾರೆ.ಅವರ ಈ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹನ್ಸಿಕಾ ತೆಲುಗು ಚಿತ್ರರಂಗದಲ್ಲಿ ಟಾಪ್ ಹೀರೋಯಿನ್. ಮೊದಲ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಹಲವು ಸಿನಿಮಾ ಅವಕಾಶಗಳು ಅರಸಿ ಬಂದವು. ಸದ್ಯ ಈ ನಟಿಗೆ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿವೆ.
ಇತ್ತೀಚೆಗೆ ದುಬೈನ ಬುರ್ಜ್ ಖಲೀಫಾದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಹನ್ಸಿಕಾ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋಗಳು ವೈರಲ್ ಆಗಿವೆ.
ಹನ್ಸಿಕಾ ಎಂಬ ಹೆಸರು ತಕ್ಷಣವೇ ಸೌತ್ ನಟಿ ಸೌಂದರ್ಯ ರಾಶಿ ಕಣ್ಣ ಮುಂದೆ ಬರುತ್ತದೆ. ಹನ್ಸಿಕಾ ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಚಿತ್ರರಂಗದಲ್ಲಿ ಖ್ಯಾತಿ ಹೊಂದಿದ್ದಾರೆ .ಅವರು ಈಗ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ, ಈ ನಟಿ ಕಳೆದ ವರ್ಷ ಸಿನಿಮಾದಲ್ಲಿ ನಟಿಸುತ್ತಲೇ ಮದುವೆಯಾದರು. ಈಗ ಪತಿಯೊಂದಿಗೆ ಆರಾಮವಾಗಿ. ಜೀವನ ಸಾಗಿಸುತ್ತಿದ್ದಾರೆ.
