ಉದಯವಾಹಿನಿ, ಕೋಲಾರ : ತಾಲ್ಲೂಕಿನ ಶಾಸಕ ಡಾ.ಕೆ.ಮಂಜುನಾಥ್ ಅವರು ತಮ್ಮ ವೇತನದಲ್ಲಿ ಕಾಲೇಜಿನ ವಿದ್ಯಾರ್ಥಿನಿಗೆ ಶುಲ್ಕವನ್ನು ಭರಿಸಲು ೪೫ ಸಾವಿರ ರೂಗಳ ಚೆಕ್ ನೀಡಿದರು. ನಗರದ ಎಸ್.ಡಿ.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿನಿಯಾಗಿದ್ದು. ಕಾಲೇಜಿನ ಶುಲ್ಕವನ್ನು ಭರಿಸಲಾಗದೆ ಶೈಕ್ಷಣಿಕ ವ್ಯಾಸಂಗಕ್ಕೆ ಅರ್ಥಿಕವಾಗಿ ತೊಂದರೆ ಉಂಟಾಗಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ತಮ್ಮ ಕಚೇರಿಗೆ ವಿದ್ಯಾರ್ಥಿ ಕರೆಸಿ ಕೊಂಡು ಶಿಕ್ಷಣ ಮುಂದುವರೆಸಲು ಅರ್ಥಿಕ ನೆರವು ನೀಡುವುದಾಗಿ ಆಶ್ವಾಸನೆ ನೀಡಿ ಪ್ರೋತ್ಸಾಹಿಸಿದರು.
