ಉದಯವಾಹಿನಿ,ಶಿಲ್ಲಾಂಗ್: ಮೇಘಾಲಯದಲ್ಲಿ ವಾರ್ಷಿಕ ಮಳೆಯಿಂದಾಗಿ ಸುಮಾರು 63 ಬಿಲಿಯನ್ ಕ್ಯೂಬಿಕ್ ಲೀಟರ್ ನೀರು ಹರಿದುಬರಲಿದ್ದು, ಈ ಪೈಕಿ ರಾಜ್ಯವು ಕೇವಲ 1 ಬಿಲಿಯನ್ ಕ್ಯೂಬಿಕ್ ಲೀಟರ್ ನೀರನ್ನು ಮಾತ್ರವೇ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.
ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಮೇಘಾಲಯ ವಾಟರ್ ಸ್ಮಾರ್ಟ್ ಕಿಡ್ ಯೋಜನೆಗೆ ಚಾಲನೆ ನೀಡಿ ಅವರು ಈ ಮಾತು ಹೇಳಿದರು. ಮಕ್ಕಳಲ್ಲಿ ನೀರು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಮೇಘಾಲಯವು ಭೂಮಂಡಲದಲ್ಲಿಯೇ ಅತ್ಯಂತ ತೇವಯುಕ್ತವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುರಿಯುವ ಒಟ್ಟು ಮಳೆ ಪ್ರಮಾಣದಲ್ಲಿ ಸುಮಾರು 31 ಬಿಲಿಯನ್ ಕ್ಯೂಬಿಕ್ ಲೀಟರ್ ನೀರು ಬಾಂಗ್ಲಾದೇಶಕ್ಕೆ ಹರಿದುಹೋದರೆ, ಅಷ್ಟೇ ಪ್ರಮಾಣದ ನೀರು ಅಸ್ಸಾಂಗೆ ಹರಿದುಹೋಗಲಿದೆ ಎಂದು ತಿಳಿಸಿದರು.
