ಉದಯವಾಹಿನಿ, ತಿರುವನಂತಪುರ: ಕೇರಳದ ಕಂಡಲ ಸೇವಾ ಸಹಕಾರಿ ಬ್ಯಾಂಕ್ ಮೇಲೆ ಬುಧವಾರ ದಾಳಿ ನಡೆಸಿದಿದ್ದ ಜಾರಿ ನಿರ್ದೇಶನಾಲಯ ಗುರುವಾರವೂ ಪರಿಶೀಲನೆ ಮುಂದುವರಿಸಿತು.
ಕಾಟ್ಟಕ್ಕಡದಲ್ಲಿರುವ ಬ್ಯಾಂಕ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸ್ಥಳಗಳು, ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಸಿಪಿಐ ನಾಯಕ ಎನ್.
ಭಾಸುರಾಂಗನ್ ಅವರ ನಿವಾಸಗಳಲ್ಲಿ ಶೋಧ ನಡೆಯುತ್ತಿದೆ.
ಇ.ಡಿ ದಾಳಿಯ ಭಾಗವಾಗಿ ಭಾಸುರಾಂಗನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರು ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಪಿಐನ ಜಿಲ್ಲಾ ಘಟಕ, ‘ಭಾಸುರಾಂಗನ್ ಅವರ ವಿರುದ್ಧ ಹಿಂದೆಯೇ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಉಚ್ಚಾಟಿಸಲಾಗಿದೆ’ ಎಂದು ತಿಳಿಸಿದೆ.
