ಉದಯವಾಹಿನಿ, ಚಿತ್ರದುರ್ಗ: ಪರುಶುರಾಂಪುರದಲ್ಲಿ ಕುರುಬ ಸಮುದಾಯದ 17 ವರ್ಷದ ಬಾಲಕನನ್ನು ಇಸ್ಲಾಂಗೆ ಮತಾಂತರಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಅಬ್ಬಾಸ್, ಬಾಲಕನ ಜತೆ ಮಾತಾಡಿರುವ ಆಡಿಯೋ ಲಭ್ಯವಾಗಿದೆ.
ಆರೋಪಿ ಅಬ್ಬಾಸ್ ಹಾಗೂ ಬಾಲಕನ ಫೋನ್ ಸಂಭಾಷಣೆ ಆಡಿಯೋ ಲಭ್ಯವಾಗಿದ್ದು, ಆರೋಪಿಯು ಈ ಆಡಿಯೋದಲ್ಲಿ ಇಸ್ಲಾಂ ಪ್ರಾರ್ಥನೆಯ ಕುರಿತಂತೆ ಬಾಲಕನಿಗೆ ಪ್ರಚೋದನೆ ನೀಡಿದ್ದಾನೆ.
ಹಣ, ಆಸ್ತಿ ಮತ್ತು ಕೆಲಸದ ಆಮಿಷ ಒಡ್ಡಿರುವ ಆರೋಪಿ ಅಬ್ಬಾಸ್, ನಮ್ಮ ಅಲ್ಲಾ ನಿನ್ನನ್ನು ಅದೆಷ್ಟು ಇಷ್ಟಪಟ್ಟಿದ್ದಾನೆ. ಈ ವಯಸ್ಸಿಗೆ ಹಲಾಲ್ ಅವಕಾಶ ನಿನಗೆ ಸಿಕ್ಕಿದೆ. ನನಗಾಗಿಯೂ ನೀನು ಪ್ರಾರ್ಥನೆ ಮಾಡು ಎಂದು ಹೇಳಿದ್ದಾನೆ.
ಅಲ್ಲದೇ, ನಿನಗೆ ಹೇಳಲಾಗದಷ್ಟು ಆರಾಮವಾಗಿರುವ ಕೆಲಸ ದೇವರು ಕೊಟ್ಟಿದ್ದಾನೆ. ಬೇರೆಯವರೆಲ್ಲ ಕೆಲಸಕ್ಕೆ ಹೋಗಿ ಕಷ್ಟ ಪಡುತ್ತಿದ್ದಾರೆ. ನಿನಗೆ ನಿನ್ನದೇ ಕೆಲಸ, ನೀನೆ ಓನರ್, ನಿನ್ನದೇ ಹಲಾಲ್. ನಿನಗೆ ಇಂಥ ಗುಡ್ ಜಾಬ್ ಎಲ್ಲೂ ಸಿಗಲ್ಲ. ಮೊದಲು ನೀನು ಸುನ್ನತ್ ಶುಕ್ರಿಯಾ ಓದು, ಮರೆಯದೆ ಓದು ಎಂದು ನಮಾಜ್ ಮಾಡುವಂತೆ ಪ್ರಚೋದನೆ ನೀಡಿದ್ದಾನೆ.
