ಉದಯವಾಹಿನಿ, ಮದ್ದೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತಂದಿದ್ದ ಮಂತ್ರಾಕ್ಷತೆಯನ್ನು ತಾಲ್ಲೂಕಿನ ನಗರಕೆರೆ ಗ್ರಾಮದಲ್ಲಿ ಭಾನುವಾರ ರಾಮಭಕ್ತರು ಪ್ರತಿ ಮನೆಗೆ ತೆರಳಿ ಶ್ರದ್ದೆ ಭಕ್ತಿಯಿಂದ ವಿತರಿಸಿ ಭಕ್ತಿ ಭಾವ ಮೆರೆದರು.
ಮುಂಜಾನೆಯೇ ಗ್ರಾಮದ ಶ್ರೀರಾಮಮಮದಿರಕ್ಕೆ ಪೂಜೆ ಸಲ್ಲಿಸಿ, ಜೈ ಶ್ರೀ ರಾಮ್ ಘೋಷಣೆ ಮೊಳಗಿಸಿ,ರಾಮನ ಭಾವಚಿತ್ರ ಹಾಗೂ ಶ್ರೀ ರಾಮಮಮದಿರ ಕುರಿತ ವಿವರಣೆ ಉಳ್ಳ ಕರಪತ್ರ ಹಂಚಿಕೆ ಮಾಡಿದರು. ಗ್ರಾಮದ ರಾಮಮಂದಿರದ ಅರ್ಚಕರಾದ ಸದಾಶಿವ ಸ್ವಾಮಿಗಳು ಚಾಲನೆ ನೀಡಿದರು.
ಗ್ರಾಮದ ಮುಖಂಡ ನ.ಲಿ. ಕೃಷ್ಣ ಮಾತನಾಡಿ, ‘ಈ ತಿಂಗಳ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಇಡೀ ದೇಶ ಸಂತೋಷಪಡುವ ವಿಷಯವಾಗಿದೆ. ಯಾವುದೇ ರಾಜಕೀಯ ವಿಷಯ ಬರುವುದಿಲ್ಲ, ಪಕ್ಷಬೇಧ ಮರೆತು ಭಾರತೀಯರಾದವರು ಸಂಭ್ರಮಪಡಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮದ ಎನ್ ಸಿ ರಾಮು, ಜಯರಾಮು, ಶಿವಾನಂದ, ರವಿ, ಸಿದ್ದೇಶ್, ಪ್ರಜ್ವಲ್, ಎನ್ ಬಿ ಚಿರಾಗ್, ಶ್ರೇಯಸ್ ಗೌಡ, ಎನ್ ಎಚ್ ಚಂದ್ರು, ಎಸ್ ಎಲ್ ರಮೇಶ್, ಸೊಂಪುರ ವೈದ್ಯೇಶ್ ಗೌಡ, ವಿಕಾಸ್ ಭಾಗವಹಿಸಿದ್ದರು.
