ಉದಯವಾಹಿನಿ, ಲಕ್ಷ್ಮೇಶ್ವರ : ತಾಲೂಕಿನ ಯಳವತ್ತಿ -ಲಕ್ಷ್ಮೇಶ್ವರ ರಸ್ತೆ ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋಗಿ ಸೇತುವೆಯ ತಡೆಗೋಡೆಗಳು ತಳ ಸಮೇತ ಕಿತ್ತು ಬಿದ್ದು ಹಾಳಾಗಿದ್ದರು ಇದುವರೆಗೂ ತಾಲೂಕ ಆಡಳಿತ ಮತ್ತು ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳದಿರುವ ಬಗ್ಗೆ ರೈತರು ತಮ್ಮ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ತಿಂಗಳ ಹಿಂದೆ ಅಂದರೆ ಜೂನ್ ತಿಂಗಳಲ್ಲಿ ಸುರಿದ ಭಾರಿ ಮಳೆ ಅನೇಕ ಅವಘಡಗಳನ್ನು ಸೃಷ್ಟಿಸಿತ್ತು ಅವುಗಳಲ್ಲಿ ಲಕ್ಷ್ಮೇಶ್ವರ ಯಳವತ್ತಿ ರಸ್ತೆ ಕಿತ್ತು ಕಿನಾರೆ ಸೇರಿ ಎರಡು ತಿಂಗಳಾಗಿದ್ದರೂ ಯಾರೊಬ್ಬರೂ ಈ ರಸ್ತೆಯನ್ನು ದುರಸ್ತಿ ಮಾಡುವಲ್ಲಿ ಮುಂದಾಗದಿರುವುದು ರೈತರ ಬೇಗುದಿಗೆ ಕಾರಣವಾಗಿದೆ.
ಮಳೆಯಿಂದ ಹಾನಿಗಿಡಾದ ಪ್ರದೇಶಗಳನ್ನು ಅಧಿಕಾರಿಗಳೊಂದಿಗೆ ಅವಲೋಕಿಸಿದ್ದ ಶಾಸಕರಾಗಲಿ ತಹಶೀಲ್ದಾರ್ ಆಗಲಿ ಸಂಬಂಧಪಟ್ಟ ಇಲಾಖೆಯವರಾಗಲಿ ಈ ರಸ್ತೆಯ ಬಗ್ಗೆ ಇದುವರೆಗೂ ಹಿಡಿ ಮಣ್ಣು ಹಾಕದೆ ರೈತರ ಸಹನೆಯನ್ನು ತಾಳ್ಮೆಯನ್ನು ಪರೀಕ್ಷಿಸುವಂತಿದೆ.
ಈಗಾಗಲೇ ಲಕ್ಷ್ಮೇಶ್ವರ ಯಳವತ್ತಿ ಮಧ್ಯದ ಗೊಜನೂರು ರೈತರ ಬಹುತೇಕ ಜಮೀನುಗಳಿದ್ದು ಈಗಾಗಲೇ ಫಸಲುಗಳು ಕೈಗೆ ಬಂದಿದ್ದು ಆದರೆ ಅವುಗಳನ್ನು ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಈ ಕುರಿತು ಗ್ರಾಮದ ರೈತ ಮುಖಂಡ ಚೆನ್ನಪ್ಪ ಷಣ್ಮುಖಿಯವರು ಪ್ರತಿಕ್ರಿಯೆ ನೀಡಿ ಎರಡು ತಿಂಗಳ ಹಿಂದೆ ಶಾಸಕರು ತಹಶೀಲ್ದಾರರು ಸಂಬಂಧಪಟ್ಟ ಅಧಿಕಾರಿಗಳು ಎಲ್ಲರೂ ಬಂದು ರಸ್ತೆ ನೋಡಿ ಹೋಗಿದ್ದಾರೆ ಆದರೆ ಇದುವರೆಗೂ ಈ ರಸ್ತೆಯನ್ನು ದುರಸ್ತಿ ಮಾಡಿಲ್ಲ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಆದ್ದರಿಂದ ಜಿಲ್ಲಾಧಿಕಾರಿಗಳು ಲಕ್ಷ್ಮೇಶ್ವರ ಯಳವತ್ತಿ ರಸ್ತೆಯನ್ನು ಪರಿಶೀಲಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!