ಉದಯವಾಹಿನಿ, ಹನೂರು : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು. ಮೈಸೂರು ಪ್ರಾಂತೀಯ ಕಚೇರಿ ವತಿಯಿಂದ ಮೈಸೂರು ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ನೂತನ ಸೌಹಾರ್ದ ಸಹಕಾರಿಗಳಿಗೆ ದಿನಾಂಕ 22.10.2024 ರಿಂದ ಎರಡು ದಿನಗಳ ಪ್ರವೇಶ ತರಬೇತಿ ಕಾರ್ಯಕ್ರಮವು ಸಾಲೂರು ಸ್ಮಾರಕ ಭವನದಲ್ಲಿ ನಡೆಯಿತು.
ತಾಲೂಕಿನ ಮಲೈ ಮಹದೇಶ್ವರ ಬೆಟ್ಟದ ಸಾಲೂರು ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ಸೌಹಾರ್ದ ಸಹಕಾರಿಗಳಿಗೆ ಪ್ರವೇಶ ತರಬೇತಿ ಕುರಿತು ಎರಡು ದಿನಗಳ ಕಾರ್ಯಾಗಾರದ ಕಾರ್ಯಕ್ರಮದ ಉದ್ಘಾಟನೆಯನ್ನು ಪೆÇನ್ನಾಚಿ ಸ್ವಾಮಿಗಳು ಸಾಲೂರು ಮಠ ಇವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಸ್ ಕೆ ಮಂಜುನಾಥ್ ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರ ಅಧ್ಯಕ್ಷತೆಯನ್ನು ವಹಿಸಿದರು ಮುಖ್ಯ ಅತಿಥಿಗಳಾಗಿ ಶ್ರೀ ನಾರಾಯಣರಾವ್ ಹಾಗೂ ಶ್ರೀ ಗುರುರಾಜ್ ಬೇಟಿ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರು ವಹಿಸಿದ್ದರು. ಕಾರ್ಯಗಾರದಲ್ಲಿ ಶ್ರೀ ಗುರುಪ್ರಸಾದ್ ಬಂಗೇರ ಪ್ರಾಂತೀಯ ಅಧಿಕಾರಿಗಳು ಹಾಜರಿದ್ದರು. 31 ಸೌಹಾರ್ದ ಸಹಕಾರಿಗಳಿಂದ 62 ಪ್ರತಿನಿಧಿಗಳು ಭಾಗವಹಿಸಿದ್ದರು. ಮೈಸೂರು ಚಾಮರಾಜನಗರ ಮಂಡ್ಯ ಕೊಡಗು 4 ಜಿಲ್ಲೆಗಳಿಂದ 2 ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಸಾಲೂರು ಬ್ರಾಹ್ಮಠಾಧ್ಯಕ್ಷರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಮೈಸೂರು ಪ್ರಾಂತ ಸೌಹಾರ್ದ ಅಧಿಕಾರಿ ಬಲರಾಮ್.ಎಸ್, ಮುಖ್ಯ ಕಾರ್ಯನಿರ್ವಾಹಕರು ಜಗದೀಶ್ ಹೆಬ್ಬಾರ್, ಚಾಮರಾಜನಗರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು ಏನ್ರಿಚ್ ಮಾದೇವಸ್ವಾಮಿ ಹಾಜರಿದ್ದರು.
