ಉದಯವಾಹಿನಿ, ಬೆಂಗಳೂರು: ಶಕ್ತಿ ಯೋಜನೆಯಲ್ಲಿ ಪರಿಷ್ಕರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದು, ಸಿಎಂ ಸಿದ್ದರಾಮಯ್ಯ ಎದುರೇ ಡಿಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ವೀರಪ್ಪ ಮೋಯಿಲಿ, ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿ ನಡೆಸಿದ ವೇಳೆ ಡಿಕೆ ಶಿವಕುಮಾರ್ ಅವರಿಗೆ ಗ್ಯಾರೆಂಟಿ ಬಗ್ಗೆ ನೀನೇನೋ ಹೇಳಿದ್ಯಲ್ಲಪ್ಪಾ.. ಎಂದು ಪ್ರಶ್ನಿಸಿದ್ದರು. ಇದಕ್ಕೆ ಕೈ ಸನ್ನೆ ಮೂಲವೇ ನಾನು ಏನೂ ಹೇಳಿಲ್ಲ ಎಂದು ಡಿಸಿಎಂ ಉತ್ತರಿಸಿದ್ದರು. ನೀನು ಪೇಪರ್ ನೋಡಿಲ್ಲಪ್ಪ, ನಾನು ನೋಡ್ತೇನೆ. ಪೇಪರ್ ನಲ್ಲಿ ನೀನು ಹೇಳಿದ್ಯಾ ಅಂತ ಬಂದಿದೆ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಿಎಂ, ಇಲ್ಲಾ ಪರಿಷ್ಕರಣೆ ಅಂತ ಬಂದಿದೆ ಎಂದು ಹೇಳಿದರು.
ಗರಂ ಆದ ಮಲ್ಲಿಕಾರ್ಜುನ ಖರ್ಗೆ ಅವರು, ಪರಿಷ್ಕರಣೆ ಮಾಡ್ತೇವೆ ಎಂದರೇ ಡೌಟ್ ಮಾಡಿದರಲ್ವಾ? ಅದನ್ನೇ ಹೇಳ್ತಿರೋದು ನಾನು, ಬಜೆಟ್ ನಲ್ಲಿ ಏನಿದೆ ಅದರಂತೆ ಗ್ಯಾರೆಂಟಿ ಕೊಡಿ ಎಂದು ಸಿಎಂ, ಡಿಸಿಎಂಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು. ಮಲ್ಲಿಕಾರ್ಜುನ ಖರ್ಗೆ ತರಾಟೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಯೂಟರ್ನ್ ಹೊಡೆದಿದ್ದಾರೆ. ಆ ಬಳಿಕ ಮಾತನಾಡಿದ ಡಿಕೆಶಿ, ಕುಮಾರಸ್ವಾಮಿಗೆ ಗ್ಯಾರಂಟಿ ಯಿಂದ ತಡೆದುಕೊಳ್ಳಲು ಆಗ್ತಿಲ್ಲ, ಜನ ಅವರನ್ನ ಧಿಕ್ಕರಿಸುತ್ತಿದ್ದಾರೆ. ಕಾಂಗ್ರೆಸ್ ಅವರು ಗ್ಯಾರಂಟಿ ಕೊಡುತ್ತಾ ಇದ್ದಾರೆ, ನೀವು ಯಾಕೆ ಬಂದಿದ್ದೀರಿ? ನಿಮ್ಮ ಕಾಲದಲ್ಲಿ ಕೆಲಸ ಮಾಡಿಲ್ಲ. ಒಬ್ಬರಿಗೆ ಒಂದು ಸೈಟ್ ಕೊಟ್ಟಿ ಫ್ರೀ ಕರೆಂಟ್ ಕೊಟ್ಟಿಲ್ಲ 2 ಸಾವಿರ ಹಣ ಕೊಟ್ಟಿಲ್ಲ. ಆದರೆ ಇದನ್ನ ತಡೆದುಕೊಳ್ಳಲು ಆಗದೇ ನಂಗೆ ಸಿಕ್ಕಿಲ್ಲ ಎಂದು ಹೊಸಕಿಕೊಳ್ತಿದ್ದಾರೆ. ನಮ್ಮ ಸರ್ಕಾರ ಕಿತ್ತು ಹಾಕೋಕೆ ಅವರ ಹಣೆಯಲ್ಲಿ ಬರೆದಿಲ್ಲ, ಇವತ್ತು ಪವಿತ್ರವಾದ ದಿನ. ಮುಂದಿನ ಎಂಟು ವರ್ಷ ಕಾಂಗ್ರೆಸ್ ಆಳ್ವಿಕೆ ನಡೆಸುತ್ತದೆ ಎಂದು ತಿಳಿಸಿದರು.
