ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2024-25ನೇ ಸಾಲಿನ ಬಿ ಎ. ಬಿಕಾಂ. ಬಿಎಸ್ಸಿ.( St ) ಬಿ ಸಿ ಎ ಬಿಬಿಎ. ಅಗಸ್ಟ್ ಸಪ್ಟಂಬರ್ ತಿಂಗಳಿನಲ್ಲಿ ಜರುಗಿದ ಎರಡು ಮತ್ತು ನಾಲ್ಕು ನೇ ಸೆಮೆಸ್ಟ್ರಿ ರೆಗ್ಯುಲರ್ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವನ್ನು ಸೆಮಿಸ್ಟರ್ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ರಾಣಿ ಚನ್ನಮ್ಮ ವಿ ವಿ ಯು ಫಲಿತಾಂಶವನ್ನು ಅತಿ ಶೀಘ್ರದಲ್ಲಿ ಪ್ರಕಟಿಸಿದ್ದು ಶ್ಲಾಘನೀಯವಾಗಿದೆ. ವಿ ವಿ ಕುಲಸಚಿವರಾದ ರವೀಂದ್ರನಾಥ ಎನ್ ಕದಮ್ ರವರ ಸಮಯೋಚಿತ ನಿರ್ಧಾರವು ವಿದ್ಯಾರ್ಥಿ ಬಳಗ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಫಲಿತಾಂಶವನ್ನು ಯು ಯು ಸಿ ಎಂ ಎಸ್ ಪ್ರೋಟಾನ್ ನಲ್ಲಿ ಪ್ರಕಟಿಸಲಾಗಿದೆ ಸದರಿ ಫಲಿತಾಂಶವನ್ನು 19/11/24 ಬೆಳ್ಳಿಗೆ 10ಘಂಟೆ ನಂತರ ಯು ಯು ಸಿ ಎಂ ಎಸ್ ಸ್ಟೂಡೆಂಟ್ ಪ್ರೋಟಲ್ ಮೂಲಕ ಪ್ರಕಟಿಸಲಾಗುವುದೆಂದು ಮಾನ್ಯ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

