ಉದಯವಾಹಿನಿ, ಬೆಂಗಳೂರು: ನಾಳೆ ರೋಮ್ ನಗರದ ವ್ಯಾಟಿಕನ್ ಸಿಟಿಯಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ಕರ್ನಾಟಕದ ವಿಧಾನಸಭೆಯ ಸ್ಪೀಕರ್ ಆಗಿರುವಂತಹ ಯುಟಿ ಖಾದರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ.
ನ.೩೦ರಂದು ಅಂದರೆ ನಾಳೆ ಅಂತರಾಷ್ಟ್ರೀಯ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ರೋಮ್‌ನ ವ್ಯಾಟಿಕನ್ ಸಿಟಿಯಲ್ಲಿ ಈ ಒಂದು ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ. ಸರ್ವಧರ್ಮ ಸಮ್ಮೇಳನದಲ್ಲಿ ಸ್ಪೀಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯು.ಟಿ. ಖಾದರ್ ಭಾಷಣ ಮಾಡಲಿದ್ದಾರೆ.
ಮಾನವೀಯತೆಗಾಗಿ ಧರ್ಮಗಳ ಬಗ್ಗಟ್ಟು ಎಂಬ ವಿಷಯವನ್ನು ಮಾತನಾಡಲಿದ್ದಾರೆ. ಈ ವೇಳೆ ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಲಿದ್ದಾರೆ.
