ಉದಯವಾಹಿನಿ, ಬಳ್ಳಾರಿ : ತಾಲೂಕಿನ ಕುರುಗೋಡು ಪಟ್ಟದಲ್ಲಿ ಕೂಡಲೇ ಭತ್ತದ ಖರೀದಿ ಕೇಂದ್ರ ತೆರೆಯಬೇಕು. ಖಾಸಗೀ ವ್ಯಾಪಾರಸ್ಥರು ಖರೀದಿ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಭತ್ತ ಕೊಯ್ಯುವ ಮಿಷನ್ಗಳ ಧರ ಕಡಿಮೆ ಮಾಡಲು ಒತ್ತಾಯಿಸಿ ರೈತರು ಧರಣಿ ಸತ್ಯಾಗ್ರಹವನ್ನು ಇಂದು ಆರಂಭಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ರೈತ ಸಂಘ (ನಂಜುಂಡಸ್ವಾಮಿ ಬಣ) ಹಾಗು ತುಂಗಭದ್ರಾ ರೈತ ಸಂಘ ಜಂಟಿಯಾಗಿ ಈ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಕುರುಗೋಡು ತಾಲೂಕು ಕೃಷಿ ಪ್ರಧಾನವಾದ ಪ್ರದೇಶ ಈ ಪ್ರದೇಶದ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರವನ್ನು ಇದುವರೆಗೂ ತೆರೆಯದೇ ಇರುವುದು ರೈತರ ದುರಾದೃಷ್ಟದ ಸಂಗತಿಯಾಗಿದೆ. ಸರ್ಕಾರ ಖರೀದಿ ಕೇಂದ್ರ ಕೇಂದ್ರ ತೆರೆಯದೇ ಇರುವುದರಿಂದ ಖಾಸಗೀ ವ್ಯಾಪಾರಸ್ಥರು ರೈತರ ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ತಮ್ಮ ಗೋಡೌನ್ ಗಳಲ್ಲಿ ಶೇಖರಣೆ ಮಾಡುತ್ತಿದ್ದಾರೆ. ಎಪಿಎಂಸಿಯ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ. ಆದರೆ ಉತ್ಪನ್ನವನ್ನು ಯಾರಿಂದ ಖರೀದಿ ಮಾಡಲಾಗಿದೆ ಯಾರು ಖರೀದಿ ಮಾಡಿದ್ದಾರೆ ಈ ಮಾಲು ಎಲ್ಲಿಗೆ ಸಾಗಾಣಿಕೆ ಮಾಡುತ್ತೀರಿ ಸದರಿ ಮಾಲಿಗೆ ಖರಿದಿಸಿದ್ದೇವೆ ಎಂಬ ದಾಖಲೆಗಳು ಏನಾದರೂ ಇದಾವೋ ಇಲ್ಲವೋ ಇದಾವುದನ್ನೂ ಪರಿಶೀಲನೆ ಮಾಡದೇ ಇರುವುದು ಖಾಸಗೀ ವ್ಯಾಪಾರಸ್ಥರ ಪರವಾದಂತಹ ನೀತಿಯಾಗಿದೆ ಸರ್ಕಾರ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಯುಕ್ತ ಹೋರಾಟ -ಕುರುಗೋಡು ತಾಲೂಕು ಸಮಿತಿ ಒತ್ತಾಯಿಸಿದೆ.
