ಉದಯವಾಹಿನಿ, ದುಬೈ: ಭಾರತ ವಿರುದ್ದದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಇಂಗ್ಲೆಂಡ್‌ ತಂಡದ ಹಿರಿಯ ಆಟಗಾರ ಜೋ ರೂಟ್‌(Joe Root) ಅವರು ಟೆಸ್ಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದಾರೆ. ಮೊದಲ ಸ್ಥಾನದಲ್ಲಿದ ಹ್ಯಾರಿ ಬ್ರೂಕ್‌ 2 ಸ್ಥಾನದ ನಷ್ಟದೊಂದಿಗೆ ಮೂರನೇ ಸ್ಥಾನ ಪಡೆದಿದಾರೆ. ಇದೇ ವೇಳೆ ಭಾರತೀಯ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಮತ್ತು ರಿಷಭ್‌ ಪಂತ್‌ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ.ಲಾರ್ಡ್ಸ್ ಟೆಸ್ಟ್‌ನಲ್ಲಿ ರೂಟ್ 104 ಮತ್ತು 40 ರನ್ ಗಳಿಸಿದ್ದರು. 34 ವರ್ಷದ ರೂಟ್‌ ಈಗ 888 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 2014 ರಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ 37 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ನಂತರ, 34 ನೇ ವಯಸ್ಸಿನಲ್ಲಿ ರೂಟ್ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಒಟ್ಟಾರೆಯಾಗಿ ರೂಟ್‌ ಅಗ್ರಸ್ಥಾನಕ್ಕೇರುತ್ತಿರುವುದು ಇದು 8ನೇ ಬಾರಿ.ನ್ಯೂಜಿಲ್ಯಾಂಡ್‌ನ ಕೇನ್‌ ವಿಲಿಯಮ್ಸನ್‌ 867 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಬ್ರೂಕ್‌(862) ಮೂರನೇ ಮತ್ತು ಆಸ್ಟ್ರೇಲಿಯಾ ಸ್ಟಿವನ್‌ ಸ್ಮಿತ್‌(816) ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌(801), ರಿಷಭ್‌ ಪಂತ್‌(779) ಮತ್ತು ಶುಭಮನ್‌ ಗಿಲ್‌(765) ರೇಟಿಂಗ್ ಪಾಯಿಂಟ್‌ಗಳೊಂದಿಗೆ ಕ್ರಮವಾಗಿ 5, 8 ಮತ್ತು 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪಂತ್‌ ಮತ್ತು ಜೈಸ್ವಾಲ್‌ ಒಂದು ಸ್ಥಾನದ ಕುಸಿತ ಕಂಡರೆ, ಗಿಲ್‌ ಮೂರು ಸ್ಥಾನದ ನಷ್ಟ ಕಂಡರು.
ಬೌಲಿಂಗ್‌ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಆದರೆ ವಿಂಡೀಸ್‌ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಆಸೀಸ್‌ನ ಸ್ಕಾಟ್‌ ಬೋಲ್ಯಾಂಡ್‌ ಮಾತ್ರ 6 ಸ್ಥಾನಗಳ ಜಿಗಿತದೊಂದಿಗೆ 6ನೇ ಸ್ಥಾನಕ್ಕೇರಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಈ ಹಿಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡಿದಾರೆ. ಉಳಿದಂತೆ ಕಗಿಸೊ ರಬಾಡ, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಲ್‌ವುಡ್‌ ಮತ್ತು ನಮನ್‌ ಅಲಿ ಟಾಪ್‌ 5ರೊಳಗೆ ಸ್ಥಾನ ಉಳಿಸಿಕೊಂಡಿದ್ದಾರೆ.

ಟಾಪ್‌-5 ಬ್ಯಾಟರ್‌ಗಳು
ಜೋ ರೂಟ್‌(888)

ಕೇನ್‌ ವಿಲಿಯಮ್ಸನ್‌(867)

ಹ್ಯಾರಿ ಬ್ರೂಕ್‌(862)

ಸ್ಟೀವನ್‌ ಸ್ಮಿತ್‌(816)

ಯಶಸ್ವಿ ಜೈಸ್ವಾಲ್‌(801)

Leave a Reply

Your email address will not be published. Required fields are marked *

error: Content is protected !!