ಉದಯವಾಹಿನಿ, ಅಮೃತಸರ: ಸಿಖ್‌ ಪವಿತ್ರ ಸ್ಥಳ ಅಮೃತಸರದ ಸ್ವರ್ಣ ಮಂದಿರಕ್ಕೆ ಮತ್ತೆ ಬಾಂಬ್‌ ಬೆದರಿಕೆ ಬಂದಿದೆ. ಕಳೆದ ಮೂರು ದಿನಗಳ ಮೂರನೇ ಬಾರಿ ಬಂದಿರುವ ಬೆದರಿಕೆ ಇದಾಗಿದೆ. ಬೆದರಿಕೆ ಕರೆ ಬಂದಿರುವ ಬೆನ್ನಲ್ಲೇ ಪೊಲೀಸರು ಸ್ವರ್ಣ ಮಂದಿರದ ಬಳಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಸ್ಥಳದಲ್ಲಿ ಶ್ವಾನ ದಳವನ್ನೂ ನಿಯೋಜಿಸಲಾಗಿದೆ. ಈ ಬಗ್ಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಕಾರ್ಯದರ್ಶಿ ಪ್ರತಾಪ್ ಸಿಂಗ್ ಪ್ರತಿಕ್ರಿಯಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಮೃತಸರದ ಪೊಲೀಸ್‌ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲಾ ಪ್ರತಿಕ್ರಿಯಿಸಿದ್ದು, ಸೋಮವಾರ ಮತ್ತು ಮಂಗಳವಾರ ಸುವರ್ಣ ದೇವಾಲಯಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಸುವರ್ಣ ದೇವಾಲಯದಲ್ಲಿ ಸ್ಫೋಟದ ಬೆದರಿಕೆ ಇಮೇಲ್ ಕುರಿತು ಪೊಲೀಸರಿಗೆ ದೂರು ಬಂದಿದೆ ಎಂದು ಹೇಳಿದರು.
ಸುವರ್ಣ ದೇವಾಲಯವು ವಿಶ್ವದ ನಂಬಿಕೆಯ ಕೇಂದ್ರವಾಗಿದೆ ಮತ್ತು ಸುವರ್ಣ ದೇವಾಲಯದಲ್ಲಿ ಸ್ಫೋಟದ ಬೆದರಿಕೆ ಇಮೇಲ್ ನಮಗೆ ಬಂದಿದೆ. ಅದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಪೊಲೀಸ್ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬಾಂಬ್ ಬೆದರಿಕೆಗಳ ಕುರಿತು ಸಮಿತಿಯು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪೊಲೀಸ್ ಉಪ ಜನರಲ್ (DGP) ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಅಮೃತಸರ ಪೊಲೀಸರ ಪ್ರಕಾರ, ಸ್ವರ್ಣ ಮಂದಿರದ ಆವರಣದಲ್ಲಿ ಬಾಂಬ್ ನಿಷ್ಕ್ರಿಯ ದಳಗಳು (BDS), SGPC ಪಡೆ ಮತ್ತು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!