ಉದಯವಾಹಿನಿ, ನವದೆಹಲಿ: ಶುಭ ಸಮಾರಂಭಗಳು, ಸಣ್ಣಪುಟ್ಟ ಕಾರ್ಯಕ್ರಮಗಳು ಎಂದಾಗ ಎಲ್ಲರಿಗೂ ನೆನಪಾಗುವುದು ಸಮೋಸಾ ಲಡ್ಡು ಮತ್ತು ಜಿಲೇಬಿ ಆದರೆ ಇದು ಆರೋಗ್ಯಕರ ಆಹಾರವಲ್ಲ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಆಹಾರಗಳ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ ಎನ್ನಲಾಗುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಇತ್ತೀಚೆಗೆ ಸಮೋಸಾ, ಜಿಲೇಬಿ ಮತ್ತು ಲಡ್ಡುಗಳ ಸೇವನೆ ಆರೋಗ್ಯಕರವಲ್ಲ ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ ಎಂಬ ವದಂತಿಗಳನ್ನು ಹರಡಲಾಗಿತ್ತು. ಆದರೆ ಇದು ಒಂದು ಸುಳ್ಳು ಸುದ್ದಿ ಎಂದು ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ಹೇಳಿದೆ.
ನಿರ್ದಿಷ್ಟ ಆಹಾರ ಪದಾರ್ಥಗಳ ಬಗ್ಗೆ ಆರೋಗ್ಯ ಇಲಾಖೆಯು ಯಾವುದೇ ಎಚ್ಚರಿಕೆ ನೀಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಈ ಸುದ್ದಿ ಸುಳ್ಳು ಎಂದು ಅದು ತನ್ನ ಹೇಳಿಕೆಯ ಮೂಲಕ ಸ್ಪಷ್ಟ ಪಡಿಸಿದೆ. ಭಾರತದ ಜನಪ್ರಿಯ ತಿಂಡಿಗಳಾದ ಸಮೋಸಾ, ಜಿಲೇಬಿ ಮತ್ತು ಲಡ್ಡು ಸೇವನೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯು ಎಚ್ಚರಿಕೆ ನೀಡಿದೆ ಎನ್ನುವ ಸುಳ್ಳು ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ ಎಂದು ಮಾಧ್ಯಮ ಮಾಹಿತಿ ಬ್ಯೂರೋದ ಸತ್ಯ ಶೋಧನಾ ಘಟಕ ಮಂಗಳವಾರ ತಿಳಿಸಿದೆ.
