ಉದಯವಾಹಿನಿ, ನವದೆಹಲಿ: ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂಬ ತೇಜಸ್ವಿ ಯಾದವ್ ಅವರ ಆರೋಪ ಸುಳ್ಳು ಎಂದು ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ. ಕರಡು ಮತದಾರರ ಪಟ್ಟಿಯ ಸೀರಿಯಲ್ ನಂಬರ್ 416 ರಲ್ಲಿ ತೇಜಸ್ವಿ ಹೆಸರಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಯಾದವ್ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿದೆ ಎಂದು ಸ್ಪಷ್ಟನೆ ನೀಡಿದೆ. ತೇಜಸ್ವಿ ಯಾದವ್ ಹೆಸರಿರುವ ಪಟ್ಟಿಯ ಪ್ರತಿಯನ್ನು ಬಿಡುಗಡೆ ಮಾಡಿ, ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಿದೆ.
ಯಾದವ್ ಹೆಸರು ಕ್ರಮ ಸಂಖ್ಯೆ 416, ಮನೆ ಸಂಖ್ಯೆ 10 ಮತ್ತು EPIC ಸಂಖ್ಯೆ RABO456228 ನೊಂದಿಗೆ ಕಾಣಿಸಿಕೊಳ್ಳುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ‘ತೇಜಸ್ವಿ ತಮ್ಮ ಹಳೆಯ EPIC ಸಂಖ್ಯೆಯನ್ನು ಬಳಸಿಕೊಂಡು ಹುಡುಕಿರಬಹುದು, ಅದಕ್ಕಾಗಿಯೇ ಅವರ ವಿವರಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ’ ಎಂದು ಆಯೋಗ ಪ್ರತಿಕ್ರಿಯಿಸಿದೆ.
ತೇಜಸ್ವಿ ಯಾದವ್ ಅವರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 416 ರಲ್ಲಿ ಇದೆ. ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿಲ್ಲ ಅನ್ನೋದು ಸುಳ್ಳು ಎಂದು ಆಯೋಗ ಹೇಳಿದೆ.
